ಅಧ್ಯಕ್ಷ ಸ್ಥಾನದಿಂದ ಮನೋಜ್ ತಿವಾರಿಯನ್ನು ಕೆಳಗಿಳಿಸಿದ ಬಿಜೆಪಿ; ದೆಹಲಿ ರಾಜಕೀಯದಲ್ಲಿ ಬಿಜೆಪಿ- ಆಪ್ ಹೊಂದಾಣಿಕೆ ಸಂಶಯ

0
919

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.3: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍‌ರವರಿಗೆ ಇದೀಗ ಸಮಬಲದ ಪ್ರತಿಸ್ಪರ್ಧಿಯಿಲ್ಲದ ವ್ಯಕ್ತಿಯನ್ನು ದೆಹಲಿ ಪ್ರದೇಶ ಬಿಜೆಪಿ ಅಧ್ಯಕ್ಷನನ್ನಾಗಿ ಮಾಡಲಾಗಿದೆ. ಮನೋಜ್ ತಿವಾರಿಯನ್ನು ಈ ಸ್ಥಾನದಿಂದ ಕೆಳಗಿಳಿಸಿ ಉತ್ತರ ದಿಲ್ಲಿಯ ಮೇಯರ್ ಆದೇಶ್ ಗುಪ್ತರಿಗೆ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ದೆಹಲಿ ಸರಕಾರವು ಕೋಮು ಗಲಭೆ ಮತ್ತು ನಿಜಾಮುದ್ದೀನ್ ತಬ್ಲೀಗ್ ಬೇಟೆ, ಪೌರತ್ವ ಹೋರಾಟಗಾರರ ಕೇಸಿಗೆ ಸಂಬಂಧಿಸಿದಂತೆ ಮೋದಿ ಸರಕಾರ ಕೇಜ್ರಿವಾಲ್‍ರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಆರೋಪದ ನಡುವೆ ಬದಲಾವಣೆ ನಡೆದಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಜೊತೆಗೆ ಛತ್ತಿಸ್ಗಡದಲ್ಲಿ ಮಣಿಪ್ಪುರದಲ್ಲಿ ಬಿಜೆಪಿ ಪ್ರಾದೇಶಿಕ ಅಧ್ಯಕ್ಷರನ್ನು ಬದಲಿಸಿದೆ. ಬಿಹಾರದಲ್ಲಿ ನಿತೀಶ್ ಕುಮಾರ್‌ರರಂತೆ ಕೇಜ್ರಿವಾಲ್ ಎನ್‍ಡಿಎಯ ಭಾಗವಾಗುವರೋ ಎಂಬ ಪ್ರಶ್ನೆಗೆ ಕೂಡ ಭೋಜ್‍ಪುರಿ ಗಾಯಕ, ನಟ ಮಾಜಿ ಸಮಾಜವಾದಿ ಪಾರ್ಟಿ ನಾಯಕ ಮನೋಜ್ ತಿವಾರಿಯನ್ನು ಕೆಳಗಿಸಿರುವುದು ಪೂರಕವಾಗಿದೆ ಎಂದು ಹೇಳಲಾಗುತ್ತಿದ್ದು, ಇವರ ಬದಲು ಹೆಚ್ಚು ಪ್ರಚಾರದಲ್ಲಿಲ್ಲದ ವ್ಯಕ್ತಿಯನ್ನು ತಂದಿದ್ದು ಅನುಮಾನಕ್ಕೀಡು ಮಾಡಿದೆ‌.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಮುಂದೆ ಬಿಜೆಪಿ ಹೀನಾಯವಾಗಿ ಸೋಲುಂಡಿತ್ತು. ದಿಲ್ಲಿ ಕೋಮು ಗಲಭೆ ವೇಳೆ ಸಂಘಪರಿವಾರಕ್ಕೆ ಅನುಕೂಲಕರವಾದ ನಿಲುವನ್ನು ಅರವಿಂದ್ ಕೇಜ್ರಿವಾಲ್ ಸ್ವೀಕರಿಸಿದ್ದರು. ನಿಝಾಮುದ್ದೀನ್ ತಬ್ಲೀಗ್ ಕೇಂದ್ರದ ವಿಚಾರದಲ್ಲಿ ಮೋದಿ ಸರಕಾರದ ಜೊತೆ ಕೇಜ್ರಿವಾಲ್ ನಿಂತಿದ್ದರು. ದೆಹಲಿ ಗಲಭೆ ನಡೆಸಿದ ಅರೋಪದಲ್ಲಿ ಸೆರೆ ಸಿಗದ ಮುಸ್ಲಿಂ ಆರೋಪಿಗಳನ್ನು ಲಾಕ್‍ಡೌನ್ ಕಾಲದಲ್ಲಿ ಸಾಮೂಹಿಕವಾಗಿ ಬಂಧಿಸಲಾಯಿತು. ವಿದ್ಯಾರ್ಥಿ ನಾಯಕರ ಸಹಿತ ಹಲವರ ವಿರುದ್ಧ ದೇಶದ್ರೋಹ ಕೇಸು ಜಡಿಯಲಾಗಿದೆ. ಇದೇ ವೇಳೇ, ಮನೋಜ್ ತಿವಾರಿಯನ್ನು ಕೂಡ ಬಿಜೆಪಿ ಬದಲಾಯಿಸಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.