ದ್ವೇಷ ಪೂರಿತ ಪೋಸ್ಟ್: ಬಂಟ್ವಾಳದ ಯುವಕನನ್ನು ಕೆಲಸದಿಂದ ವಜಾಗೊಳಿಸಿದ ಶಾರ್ಜದ ಪ್ರತಿಷ್ಠಿತ ಕಂಪೆನಿ

0
1330

ಸನ್ಮಾರ್ಗ ವಾರ್ತೆ

ಬಂಟ್ವಾಳ,ಜೂ.4: ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಪೂರಿತ ಪೋಸ್ಟ್ ಹಾಕುವವರನ್ನು ಕೆಲಸದಿಂದಲೂ ಉನ್ನತ ಹುದ್ದೆಗಳಿಂದಲೂ ತೆಗೆದು ಹಾಕುವ ಕ್ರಮವನ್ನು ಈಗಾಗಲೇ ಸೌದಿ ಅರೇಬಿಯಾ, ನ್ಯೂಝಿಲೆಂಡ್ ಸೇರಿದಂತೆ ಕೆನಡಾ ಕಂಪೆನಿಗಳು ಹಾಗೂ ಕಾಲೇಜು ಸಂಸ್ಥೆಗಳು ಕ್ರಮ ಜರುಗಿಸುತ್ತಿದ್ದು, ಇದೀಗ ಮತ್ತೊಬ್ಬ ಭಾರತೀಯ ಯುವಕನನ್ನು ಶಾರ್ಜಾದ ಪ್ರತಿಷ್ಠತ ಕಂಪೆನಿಯೊಂದು ದ್ವೇಷ ಪೂರಿತ ಪೋಸ್ಟ್‌ ಹಾಕಿದ ಕಾರಣಕ್ಕಾಗಿ ಕೆಲಸದಿಂದ ತೆಗೆದುಹಾಕಿದೆ.

ಇಸ್ಲಾಮ್ ಧರ್ಮ ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಪೋಸ್ಟ್ ಹಾಕಿರುವ ಹಿನ್ನೆಲೆಯಲ್ಲಿ ಶಾರ್ಜಾದ ಪ್ರತಿಷ್ಠಿತ ಕಂಪೆನಿಯೊಂದು ಬಂಟ್ವಾಳ ತಾಲೂಕಿನ ಯುವಕನೊಬ್ಬನನ್ನು ಕೆಲಸದಿಂದ ವಜಾಗೊಳಿಸಿದ್ದು, ಯುವಕನನ್ನು ಬಂಟ್ವಾಳ ತಾಲೂಕಿನ ಕಾವಳಕಟ್ಟೆ ನಿವಾಸಿ ಸಂದೀಪ್ ನಾಯಕ್ ಎಂದು ಗುರುತಿಸಲಾಗಿದೆ.

ಶಾರ್ಜಾದ ಅಲ್ ಫುಥೆನ್‌ನ ಹೋಂಡಾ ಕಂಪೆನಿಯಲ್ಲಿ ಕೆಲಸದಲ್ಲಿದ್ದ ಸಂದೀಪ್ ನಾಯಕ್ ಫೇಸ್‌ಬುಕ್ ನಲ್ಲಿ ದ್ವೇಷಪೂರಿತ ಪೋಸ್ಟ್ ಹಾಕಿದ್ದ ಎನ್ನಲಾಗಿದೆ. ಈ ಪೋಸ್ಟ್ ವೈರಲ್ ಆದ ಬೆನ್ನಿಗೆ ವಿಷಯವನ್ನರಿತ ಸಂದೀಪ್ ನಾಯಕ್ ಕೆಲಸ ಮಾಡುತ್ತಿದ್ದ ಕಂಪೆನಿಯು ಆತನನ್ನು ಕಂಪೆನಿ ಕೆಲಸದಿಂದ ಉಚ್ಛಾಟಿಸಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.