ಸನ್ಮಾರ್ಗ ವಾರ್ತೆ
ದುಬೈ,ಜೂ.4: ವೀಸಾ ಅವಧಿ ಮುಗಿದು ರೆಸಿಡೆಂಟ್ ವೀಸಾ ಇರುವವರು ನಮ್ಮಲ್ಲಿಗೆ ಬರಬಹುದು ಎಂದು ಯುಎಇ ಸರಕಾರ ಸೂಚಿಸಿದೆ. ಆದರೆ ಭಾರತದ ಅನಿವಾಸಿಗಳಿಗೆ ಇದು ಪ್ರಯೋಜನವಾಗುವುದಿಲ್ಲ. ವೀಸಾ ಅವಧಿ ಮುಗಿಸಿ ಬಂದವರಿಗೆ ವಿದೇಶಕ್ಕೆ ಹೋಗಲು ಅನುಮತಿ ಕೊಡಬಾರದೆಂದು ಕೇಂದ್ರ ಗೃಹ ಸಚಿವಾಲಯದ ತೀರ್ಮಾನ ಇರುವುದರಿಂದ ದುಬೈಗೆ ಹೋಗುವವರಿಗೆ ಸಂಕಷ್ಟ ಎದುರಾಗಿದೆ.
ಜೂನ್ 1 ರಂದು ಮೂರು ತಿಂಗಳ ವೀಸಾ ಸಮಯ ಇರುವವರಿಗೆ ಪ್ರಯಾಣ ಅನುಮತಿ ಕೊಟ್ಟರೆ ಸಾಕು ಎಂದು ಸರ್ಕ್ಯುಲರ್ ಹೊರಡಿಸಲಾಗಿದೆ. ಶಿಕ್ಷಣ ಸಂಸ್ಥೆಗಳು, ಕಂಪೆನಿಗಳ ಆಫರ್ ಲೆಟರ್ ಇದ್ದರೆ ಕೂಡ ಒಂದು ತಿಂಗಳ ವೀಸಾ ಅವಧಿ ಇರಬೇಕೆಂಬುದು ಕಡ್ಡಾಯವಾಗಿದೆ ಎಂದು ಸರ್ಕ್ಯುಲರ್ ಹೇಳುತ್ತಿದೆ.
ಮಾರ್ಚ್ 1 ನಂತರ ವೀಸಾ ಕೊನೆಗೊಳ್ಳುವವರಿಗೆ ಡಿಸೆಂಬರ್ 31ರವರೆಗೆ ಯುಎಇಯಲ್ಲಿ ಇರಬಹುದು ಎಂದು ಅಧಿಕಾರಿಗಳು ತಿಳಿಸಿದ್ದರು. ವೀಸಾ ಅವಧಿ ಕೊನೆಯಾದ ರೆಸಿಡೆಂಟ್ ವೀಸಾದವರು ಊರಿನಲ್ಲಿದ್ದರೆ ಅವರಿಗೆ ಮರಳಿ ಬರಬಹುದು ಎಂದು ತಿಳಿಸಲಾಗಿತ್ತು. ಇದರೊಂದಿಗೆ ಹಲವು ಕುಟುಂಬಗಳು ಯುಎಇಗೆ ಮರಳಲು ಆನ್ಲೈನ್ನಲ್ಲಿ ಅರ್ಜಿ ಗುಜರಾಯಿಸಿಕೊಂಡಿದ್ದವು.
ಹೊಸ ವೀಸಾ ಕೊಡುವುದನ್ನು ಯುಎಇ ನಿಲ್ಲಿಸಿದ್ದರೂ ಹಳೆ ವೀಸಾ ಇರುವವರು ಇಲ್ಲಿಗೆ ಬರಬಹುದು ಎಂದು ಹೇಳಿತ್ತು. ಆದರೆ ಅದು ಕೂಡ ಕೇಂದ್ರ ಸರಕಾರದ ನೋಟಿಫಿಕೇಶನ್ ಮೂಲಕ ಇಲ್ಲದಾಗಿದೆ. ಈ ವಿಷಯದಲ್ಲಿ ಕೇಂದ್ರ ಸರಕಾರದೊಂದಿಗೆ ಮಾತಾಡಿದ್ದೇವೆ ಎಂದು ಯುಎಇಯ ಇಂಡಿಯನ್ ಕೌನ್ಸುಲ್ ಜನರಲ್ ವಿಪುಲ್ ಹೇಳಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












