ಆನ್‍ಲೈನ್ ಕ್ಲಾಸ್ ನೋಡುತ್ತಿದ್ದ ವೇಳೆ ಕಾಡುಹಂದಿ ದಾಳಿ; ವಿದ್ಯಾರ್ಥಿಗಳಿಗೆ ಗಾಯ

0
603

ಸನ್ಮಾರ್ಗ ವಾರ್ತೆ

ಕೇರಳ,ಜೂ.12: ಮೊಬೈಲ್ ಫೋನ್‍ನಲ್ಲಿ ಆನ್‌ಲೈನ್ ತರಗತಿ ನೋಡುತ್ತಿದ್ದ ವಿದ್ಯಾರ್ಥಿಯ ಮೇಲೆ ಕಾಡು ಹಂದಿ ದಾಳಿ ಮಾಡಿದ ಘಟನೆ ಕೇರಳದ ಪಾಲಕ್ಕಾಡ್ ಸಮೀಪ ನಡೆದಿದೆ. ಪಯ್ಯಲ್ಲೂರ್ ಹರಿಜನೋದ್ಧಾರ ಗ್ರಂಥಶಾಲೆಯ ಸಮೀಪದ ಸುರೇಶ್-ಉಷಾ ದಂಪತಿಯ ಪುತ್ರಿ ಯದು ಕೃಷ್ಣಾ(14) ಮೇಲೆ ಕಾಡು ಹಂದಿ ದಾಳಿ ನಡೆಸಿದೆ. ಮೊನ್ನೆ ಮನೆಯ ಸಮೀಪ ಏಳನೆ ಕ್ಲಾಸಿನ ವಿದ್ಯಾರ್ಥಿನಿ ಯದು, ಅವರ ಸಹೋದರಿಯರಾದ ರಿತು ಕೃಷ್ಣಾ, ದಿಯಾ ಕೃಷ್ಣಾ ವಿಕ್ಟರ್ಸ್ ಚ್ಯಾನೆಲ್‍ನ ಆನ್‍ಲೈನ್ ಕ್ಲಾಸು ನೋಡುತ್ತಿದ್ದಾಗ ಹಂದಿ ಬಂದಿತ್ತು.

ಅನಿರೀಕ್ಷಿತವಾಗಿ ಹಂದಿ ಬಂದಾಗ ಚಿಕ್ಕ ತಂಗಿಯರು ಬೇರೆ ಕಡೆ ಓಡಿ ಹೋದರು. ಇದೇ ವೇಳೇ ಯದು ಕೃಷ್ಣಗೆ ಹಂದಿ ದಾಳಿ ಮಾಡಿದೆ. ಬಲಗೈಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದೆ. ಅವಳ ತಂಗಿಯರು ಹೆದರಿ ಓಡಿಹೋಗಿ ಗಾಯಮಾಡಿಕೊಂಡಿದ್ದಾರೆ.

ಓದುಗರೇ ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.