ಹೈದರಾಬಾದ್: ತೆರೆದ ಮಸೀದಿಯಲ್ಲಿ ಮನತೆರೆದು ಮಾತಾಡಿದ ಸಂದರ್ಶಕರು..

0
1387

ವಿವಿಧ ಸಮುದಾಯಗಳ ಜನರ ಮನಸ್ಸಿನಲ್ಲಿ ಇಸ್ಲಾಂ ಮತ್ತು ಮಸೀದಿಗಳ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ನೀಗಿಸಲು ಈ ನಗರದ ಮೊದಲ ಕಾರ್ಯಕ್ರಮವು ಮಸೀದಿಯ ವ್ಯವಸ್ಥಾಪನಾ ಸಮಿತಿಯಿಂದ ಆಯೋಜಿಸಲ್ಪಟ್ಟಿತು.
ಮಸೀದಿಯ ಸಂದರ್ಶಕರಲ್ಲಿ ಒಬ್ಬರಾದ ಇಂಟ್ಯಾಕ್ ಸದಸ್ಯೆ ಪಿ. ಅನುರಾಧ ರೆಡ್ಡಿ, “ಸಮುದಾಯಗಳ ನಡುವೆ ಉತ್ತಮ ತಿಳುವಳಿಕೆಯನ್ನು ಉತ್ತೇಜಿಸಲು ಸಂಘಟಕರಿಂದ ಇದು ಉತ್ತಮ ಆರಂಭವಾಗಿದೆ” ಎಂದು ಹೇಳಿದರು.
ಮಹಿಳೆಯಾಗಿ ಅವರಿಗೆ ಐತಿಹಾಸಿಕ ಸ್ಥಳಗಳನ್ನು ಹೊರತುಪಡಿಸಿ ಮಸೀದಿಗಳನ್ನು ಪ್ರವೇಶಿಸಲು ಎಂದಿಗೂ ಅನುಮತಿ ಸಿಕ್ಕಿರಲಿಲ್ಲ. “ಒಂದು ಮಸೀದಿಯು ಒಳಗಿನಿಂದ ತೋರುತ್ತಿರುವುದನ್ನು ನೋಡಲು ಮತ್ತು ಅಲ್ಲಿನ ಚಟುವಟಿಕೆಗಳನ್ನು ಗಮನಿಸಲು ನಾನು ಈಗ ಒಂದು ಅವಕಾಶವನ್ನು ಪಡೆದುಕೊಂಡಿದ್ದೇನೆ” ಎಂದು ಅವರು ಹೇಳಿದರು.
ಮಹಿಳಾ ಸ್ವಯಂ ಸೇವಕರ ಗುಂಪೊಂದು ಇಸ್ಲಾಮಿನಲ್ಲಿ ಮಹಿಳೆಯರ ಶಿಕ್ಷಣ, ಆಸ್ತಿ, ಕುಟುಂಬದಲ್ಲಿನ ಅವರ ಸ್ಥಾನಮಾನ ,ಮಹಿಳೆಯರ ಹಕ್ಕುಗಳ ಬಗ್ಗೆ ವಿವರಿಸಿದರು.
ಮತ್ತೋರ್ವ ಸಂದರ್ಶಕರು ಸಂಘಟಕರ ಈವೆಂಟನ್ನು ನಡೆಸುವ ನಿರ್ಧಾರದ ಕುರಿತು ಸಂತೋಷ ವ್ಯಕ್ತಪಡಿಸಿದರು. “ನಮ್ಮನ್ನು ಸ್ವಾಗತಿಸಲಾಯಿತು. ಮಸೀದಿಯ ಸುತ್ತಲೂ ಚಟುವಟಿಕೆಗಳನ್ನು ವೀಕ್ಷಿಸಲು ಅನುಮತಿಸಲಾಯಿತು. ಮಹಿಳೆಯರ ಹಕ್ಕುಗಳು ಮತ್ತು ಇತರ ಪ್ರಶ್ನೆಗಳಿಗೆ ತೃಪ್ತಿಕರವಾಗಿ ಉತ್ತರಿಸಲಾಯಿತು. ಇಂತಹ ಪರಿಪಾಠಗಳು ಸಮುದಾಯಗಳ ನಡುವೆ ಸೇತುವೆಯ ಕಾರ್ಯ ಹಾಗೂ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ” ಎಂದು ಹೇಳಿದರು.
ಸಂದರ್ಶಕರಿಗೆ ಇಸ್ಲಾಂನ ಮೂಲಭೂತ ತತ್ತ್ವಗಳನ್ನು ವಿವರಿಸುವ ಮುದ್ರಿತ ಪಟ್ಟಿಯನ್ನು ಮಸೀದಿಯ ಮೊದಲ ಮಹಡಿಯಲ್ಲಿ ಇರಿಸಲಾಯಿತು. ತಿನ್ನಲು ಖರ್ಜೂರ ಮತ್ತು ಶೀರ್ ಖುರ್ಮವನ್ನು ನೆಲ ಮಹಡಿಯಲ್ಲಿ ಸಂದರ್ಶಕರಿಗೆ ನೀಡಲಾಯಿತು.
ತೆರೆದ ಮಸೀದಿಯ ಕಲ್ಪನೆಯನ್ನು ಇತ್ತೀಚೆಗೆ ಇಸ್ಲಾಮ್ ಸ್ವೀಕರಿಸಿದ ಮೊಹಮ್ಮದ್ ಮುಸ್ತಫಾ ಆಯೋಜಿಸಿದರು. ಇಂತಹ ಕಾರ್ಯಕ್ರಮವು ಇಸ್ಲಾಂ ಧರ್ಮವನ್ನು ಸ್ಪಷ್ಟವಾದ ತಿಳಿದುಕೊಳ್ಳಲು ಮತ್ತು ಸುಲಭವಾಗಿ ಗ್ರಹಿಸಲು ಸಹಾಯ ಮಾಡಬಲ್ಲದು ಎಂದು ಅವರು ಹೇಳುತ್ತಾರೆ.