ದೇಶದಲ್ಲಿ 3‌,08,993 ಕೊರೋನ ಪ್ರಕರಣಗಳು: 24 ಗಂಟೆಯಲ್ಲಿ 11,458 ಜನರಿಗೆ ಸೋಂಕು ದೃಢ

0
1180

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.13: ದೇಶದಲ್ಲಿ ನಿರಂತರ ಎರಡನೆ ದಿನವೂ 10,000ಕ್ಕೂ ಹೆಚ್ಚು ಮಂದಿಗೆ ಕೊರೋನ ದೃಢಪಟ್ಟಿದೆ. 24 ಗಂಟೆಯಲ್ಲಿ ಹೊಸದಾಗಿ 11,458 ಮಂದಿಗೆ ಕೊರೋನ ದೃಢಪಟ್ಟಿದೆ. ದೇಶದಲ್ಲಿ ಒಟ್ಟು 3,08,993 ಮಂದಿಗೆ ರೋಗ ದೃಢಪಟ್ಟಿದೆ. 24 ಗಂಟೆಗಳಲ್ಲಿ 386 ಮಂದಿ ಮೃತಪಟ್ಟಿದ್ದು, ಇದುವರೆಗೆ ದೇಶದಲ್ಲಿ ಒಟ್ಟು 8,884 ಮಂದಿ ಕೊರೋನಕ್ಕೆ ಬಲಿಯಾಗಿದ್ದಾರೆ. 1,14,779 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. 1,54,330 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೊರಡಿಸಿದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಮಹಾರಾಷ್ಟ್ರ, ದಿಲ್ಲಿ, ತಮಿಳ್ನಾಡು ರಾಜ್ಯಗಳಲ್ಲಿ ಅತೀ ಹೆಚ್ಚು ರೋಗಪೀಡಿತರಿದ್ದಾರೆ. ಮಹಾರಾಷ್ಟ್ರದಲ್ಲಿ ಹೊಸದಾಗಿ 1,366 ಮಂದಿಗೆ ಕೊರೋನ ದೃಢಪಟ್ಟಿದೆ. ಇದರೊಂದಿಗೆ ಇಲ್ಲಿ ರೋಗ ಪೀಡಿತರ ಸಂಖ್ಯೆ 1,01,141ಕ್ಕೇ ಏರಿಕೆಯಾಗಿದೆ. 3,717 ಮಂದಿ ಮೃತಪಟ್ಟಿದ್ದಾರೆ. ಮುಂಬೈ ನಗರಿಯಲ್ಲೇ 55,451 ಮಂದಿ ರೋಗಪೀಡಿತರಿದ್ದು, ಇಲ್ಲಿ 2,044 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ, ಕಳೆದ 24 ಗಂಟೆಗಳಲ್ಲಿ 90 ಮಂದಿ ಮೃತಪಟ್ಟಿದ್ದಾರೆ. ದಿಲ್ಲಿಯಲ್ಲಿ ಹೊಸದಾಗಿ 2,137 ಮಂದಿಗೆ ಕೊರೋನ ದೃಢಪಟ್ಟಿದೆ. 71 ಸಾವುಗಳು ವರದಿಯಾಗಿವೆ. ಇದರೊಂದಿಗೆ ದಿಲ್ಲಿಯಲ್ಲಿ 1214 ಮಂದಿ ಮೃತಪಟ್ಟಿದ್ದು, 36,824 ಮಂದಿಗೆ ರೋಗ ದೃಢವಾಗಿದೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.