ಕಾಶೀ ಮಥುರಾ ದೇವಾಲಯಗಳ ಕುರಿತು ಮತ್ತೆ ತಗಾದೆ; ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ ಹಿಂದುತ್ವ ಸಂಘಟನೆಗಳು

0
636

ಸನ್ಮಾರ್ಗ ವಾರ್ತೆ

ನವದೆಹಲಿ: ಮಥುರಾ ಕಾಶೀ ಮುಂತಾದೆಡೆ ವಿವಾದದ ಹೊಸ ಬಾಗಿಲು ತೆರೆಯಲು ಹಿಂದುತ್ವ ಸಂಘಟನೆಗಳು ರಂಗಕ್ಕಿಳಿದಿವೆ. 1991ರಲ್ಲಿ ಜಾರಿಗೆ ಬಂದಂತಹ ಪೂಜಾ ಸ್ಥಳಗಳ ಕುರಿತು ಇರುವ ಕಾನೂನನ್ನು ರದ್ದು ಮಾಡಬೇಕೆಂದು ವಿಶ್ವಭದ್ರ ಪೂಜಾರಿ ಪುರೋಹಿತ್ ಮಹಾ ಸಂಘ್ ಎಂಬ ಸಂಘಟನೆ ಸುಪ್ರೀಮ್ ಕೋರ್ಟ್ ಮೆಟ್ಟಲೇರಿದ್ದು, ಮತ್ತೆ ಮಥುರಾ ಕಾಶೀ ವಿವಾದ ಗರಿಗೆದರಿದೆ. ಎರಡೂ ಕಡೆ ದೇವಾಲಯದ ಪಕ್ಕ ಮಸೀದಿಗಳಿವೆ.

1947 ಆಗಸ್ಟ್ 15ರಂದು ದೇವಾಲಯಗಳನ್ನು ಮುಸ್ಲಿಮ್ ಮಸೀದಿಗಳಾಗಿ ಬದಲಾಯಿಸಿದ್ದು ಮತ್ತು ಮಸೀದಿಗಳನ್ನು ದೇವಾಲಯಗಳನ್ನಾಗಿ ಪರಿವರ್ತಿಸುವುದನ್ನು ನಿಷೇಧಿಸಿ ಇರುವ 1991ರ ಆರಾಧನಾಲಯಗಳ ಬಗ್ಗೆ ಇರುವ ನಿಯಮದ ನಾಲ್ಕನೇಯ ಕಲಂನ್ನು ರದ್ದು ಪಡಿಸಬೇಕೆಂದು ಸಂಘಟನೆ ಆಗ್ರಹಿಸಿದೆ. ಬಾಬರಿ ಮಸೀದಿ ಒಡೆದು ನಂತರ ರಾಮಮಂದಿರದ ಪರವಾಗಿ ಸುಪ್ರೀಮ್ ತೀರ್ಪು ಬಂದ ನಂತರ ಕಾಶೀ ಮಥುರಾ ಮುಂತಾದ ಕಡೆಗಳಲ್ಲಿ ಹಿಂದುತ್ವ ಶಕ್ತಿಗಳು ಮುಸ್ಲಿಮ್ ಮಸೀದಿಗಳನ್ನು ಗುರಿಯಾಗಿಸಿಕೊಂಡು ರಂಗಕ್ಕಿಳಿದಿದೆ.

ಬಾಬರಿ ಮಸೀದಿ ಒಡೆದ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಲು ಮತ್ತು ಮಸೀದಿಗೆ ಐದು ಕಾಲು ಎಕರೆ ಜಾಗ ನೀಡಲು ಕಳೆದ ವರ್ಷದ ನವೆಂಬರ್‌ನಲ್ಲಿ ಸುಪ್ರೀಮ್ ಕೋರ್ಟು ತೀರ್ಪಿತ್ತಿದ್ದನ್ನು ಇಲ್ಲಿ ಸ್ಮರಿಸಬಹುದು. 1991 ಕಾನೂನು ಭಾರತದ ಜಾತ್ಯಾತೀತ ಪರಂಪರೆಯನ್ನು ಸಂರಕ್ಷಿಸುವಂತಹದ್ದು ಇದು ಸಂವಿಧಾನದ ತತ್ವವನ್ನು ಕಾಪಾಡುವಂತಹದ್ದು ಎಂದೂ ತೀರ್ಪೀನಲ್ಲಿ ಹೇಳಲಾಗಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.