ಗಡಿ ದಾಟಿದ ಆರೋಪದಲ್ಲಿ ಬಂಧಿತ ಭಾರತೀಯನನ್ನು ಬಿಡುಗಡೆಗೊಳಿಸಿದ ನೇಪಾಳ

0
575

ಸನ್ಮಾರ್ಗ ವಾರ್ತೆ

ಪಾಟ್ನ,ಜೂ.13: ಗಡಿದಾಟಿದ್ದಕ್ಕೆ ಸಂಬಂಧಿಸಿದ ವಿವಾದದ ನಡುವೆ ನೇಪಾಳ ಪೊಲೀಸರು ಬಂಧಿಸಿದ್ದ ಭಾರತೀಯ ವ್ಯಕ್ತಿಯನ್ನು ಬಿಡುಗಡೆಗೊಳಿಸಿದ್ದಾರೆ. ಶುಕ್ರವಾರ ನೇಪಾಳ ಸಶಸ್ತ್ರ ಪೊಲೀಸರು ರಾಮ್ ಲಕನ್ ಯಾದವ್(45) ಎಂಬಾತನನ್ನು ಬಂಧಿಸಿದ್ದರು.ತದನಂತರ ಆತನನ್ನು ಶನಿವಾರ ಬೆಳಗ್ಗೆ ಬಿಡುಗಡೆಗೊಳಿಸಿದ್ದಾರೆ.

ಪಾಟ್ನದಿಂದ 134 ಕಿಲೊಮೀಟರ್ ದೂರದ ಬಿಹಾರದ ಸೀತಾಮಡಿ ಎಂಬಲ್ಲಿನ ನಿವಾಸಿ ರಾಮ್ ಲಕನ್ ಯಾದವ್, ನೇಪಾಳದಲ್ಲಿರುವ ಸಂಬಂಧಿಕರನ್ನು ಭೇಟಿಯಾಗುವುದಕ್ಕಾಗಿ ಗಡಿ ದಾಟಿದ್ದರು. ಇವರ ಬಂಧನದ ನಂತರ ಸೀತಾಮಡಿಯ ಭಾರತ- ನೇಪಾಳ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯಿದೆ. ಗಡಿದಾಟಿದ್ದಾನೆ ಎಂದು ಆರೋಪಿಸಿ ವಿಕೇಶ್ ಯಾದವ್ ಎಂಬ ಯುವ ರೈತನನ್ನು ನೇಪಾಳ ಪೊಲೀಸರು ಗುಂಡಿಟ್ಟು ಕೊಂದು ಹಾಕಿದ್ದರು.ಅಲ್ಲದೇ, ಉದಯ್ ಠಾಕೂರ್(24), ಉಮೇಶ್ ರಾಮ್(18) ಎಂಬ ಯುವಕರನ್ನು ಗಾಯಗೊಳಿಸಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.