ಭಾರತೀಯ ಸೈನಿಕರ ಮೇಲೆ ಚೀನಾ ಪಡೆಯಿಂದ ಕಲ್ಲು, ಮೊಳೆಗಳಿದ್ದ ಕೋಲುಗಳಿಂದ ದಾಳಿ

0
995

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.18: ಗಡಿಯಲ್ಲಿ ಭಾರತದ ಸೈನಿಕರ ಮೇಲೆ ಹಲ್ಲೆ ನಡೆಸಲು ಚೀನ ಕಲ್ಲುಗಳು ಮತ್ತು ಮೊಳೆಗಳಿದ್ದ ಕೋಲುಗಳನ್ನು ಉಪಯೋಗಿಸಿದೆ ಎಂದು ವರದಿಯಾಗಿದ್ದು, ಮೊಳೆಗಳ ಕೋಲಿನಿಂದ ಅವರು ಹೊಡೆದಿದ್ದಾರೆ. ಗಡಿಯಲ್ಲಿ ಗುಂಡು ಹಾರಟ ನಡೆದಿಲ್ಲ ಎಂದು ಅಧಿಕಾರಿಗಳು ದೃಢೀಕರಿಸಿದ್ದಾರೆ. ಇದರ ಚಿತ್ರವನ್ನು ಹೊರಗೆ ಬಿಡಲಾಗಿದೆ.

16 ಬಿಹಾರ ರೆಜಿಮೆಂಟಿನ ಕಮಾಂಡಿಗ್ ಅಧಿಕಾರಿ ಕರ್ನಲ್ ಸಂತೋಷ್ ಬಾಬು ಸಹಿತ 20 ಸೈನಿಕರನ್ನು ದೇಶ ಕಳಕೊಂಡಿದೆ. ಸೋಮವಾರ ರಾತ್ರೆ ಚೀನಾ ಪಡೆಯು ಕಲ್ಲು ಮತ್ತು ಮೊಳೆಗಳಿದ್ದ ಕೋಲಿನಿಂದ ನಮ್ಮ ಸೈನಿಕರನ್ನು ಆಕ್ರಮಿಸಿದೆ. ಈ ರೀತಿಯ ಮೊಳೆಗಳಿದ್ದ ಬೆತ್ತಗಳನ್ನು ಮೇ 18ಕ್ಕೆ ಮತ್ತು 19ಕ್ಕೆ ಲಡಾಕ್‍ನಲ್ಲಿ ನಡೆದ ದಾಳಿಯಲ್ಲಿ ಚೀನಾ ಉಪಯೋಗಿಸಿತ್ತು. ಸೈನಿಕರ ಮೃತದೇಹದಲ್ಲಿ ಗಾಯಗಳು ಕಂಡು ಬಂದುದು ಆತಂಕವನ್ನು ಸೃಷ್ಟಿಸಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.