ಟ್ರಂಪ್‍ರಿಂದ ನಕಲಿ ವೀಡಿಯೊ: ತೆಗೆದು ಹಾಕಿದ ಟ್ವಿಟರ್

0
540

ಸನ್ಮಾರ್ಗ ವಾರ್ತೆ

ಲಂಡನ್,ಜೂ.20: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಪುನಃ ಟ್ವಿಟರ್ ಪ್ರತಿಕ್ರಿಯಿಸಿದೆ. ಟ್ರಂಪ್ ಹಾಕಿದ್ದ ವೀಡಿಯೊ ನಕಲಿಯೆಂದು ಗೊತ್ತಾದ ಮೇಲೆ ಟ್ವಿಟರ್ ಅವರ ವೀಡಿಯೊವನ್ನು ತೆಗೆದು ಹಾಕಿತು. ಜನಾಂಗೀಯತೆಗೆ ಸಂಬಂಧಿಸಿದ ಎರಡು ಮಕ್ಕಳ ವೀಡಿಯೊವನ್ನು ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದರು. ಅಶುಭ ಸಂಗೀತದೊಂದಿಗೆ ವೀಡಿಯೊ ಆರಂಭವಾಗಿತ್ತು.

ಕಪ್ಪು ವಂಶದ ಒಂದು ಮಗು ಓಡಿ ಹೋಗುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಇದರ ಕೆಳಗೆ ವಂಶೀಯತೆಯಿಂದ ರಕ್ಷೆ ಪಡೆಯುವ ಕಪ್ಪು ವಂಶಜನಾದ ಬಾಲಕ ಎಂಬ ಬರಹ ಇತ್ತು. ಆದರೆ ಇದು ಮಕ್ಕಳ ಸೌಹಾರ್ದ ಹಂಚುವುದಕ್ಕಾಗಿ ಒಂದು ವರ್ಷ ಸಿಎನ್‍ಎನ್ ಮಾಡಿದ ವಾರ್ತೆಯೊಂದರ ವೀಡಿಯೋ ಆಗಿದೆ. ಅದನ್ನು ಎಡಿಟ್ ಮಾಡಿ ಟ್ರಂಪ್ ಟ್ವೀಟ್ ಮಾಡಿದ್ದರು.

ಸಿಎನ್‍ಎನ್ ರೀತಿಯಲ್ಲಿಯೇ ಬರಹವನ್ನೂ ಬರೆಯಲಾಗಿತ್ತು. ಅದರ ಕೆಳಗೆ ಅಮೆರಿಕವಲ್ಲ, ನಕಲಿ ಸುದ್ದೀಯೇ ಸಮಸ್ಯೆಯಾಗಿದೆ ಎಂದು ಟ್ಯಾಗ್ಲೈನ್ ಅನ್ನು ಟ್ರಂಪ್ ನೀಡಿದ್ದರು. ಘಟನೆ ವೈರಲ್ ಆಗುವುದರೊಂದಿಗೆ ವೀಡಿಯೊವನ್ನು ಪರಿಶೀಲಿಸಿದ ಟ್ವಿಟರ್ ನಕಲಿ ವೀಡಿಯೋ ಎಂದು ಪತ್ತೆ ಹಚ್ಚಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.