ಕೊರೋನ ಹಿನ್ನಲೆ: 65 ವರ್ಷ ಮೀರಿದವರಿಗೆ ಟಪಾಲು ಮತದಾನ ವ್ಯವಸ್ಥೆ!

0
529

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.20: ಕೊರೋನ ಹಿನ್ನೆಲೆಯಲ್ಲಿ 65 ವರ್ಷ ಮೇಲ್ಪಟ್ಟವರು ಪೋಸ್ಟಲ್ ಮತದಾನ ಮಾಡಲು ಅನುಮತಿಸುವ ಚುನಾವಣಾ ಆಯೋಗದ ನಿರ್ದೇಶವನ್ನು ಕೇಂದ್ರ ಸರಕಾರ ಪರಿಶೀಲಿಸುತ್ತಿದೆ. ಇದಕ್ಕೆ ಸಂಬಂಧಿಸಿದ ಶಿಫಾರಸು ಕೇಂದ್ರ ಸರಕಾರದ ಪರಿಗಣನೆಯಲ್ಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ಹೇಳಿದರು. ಸಾಮಾಜಿಕ ಅಂತರ ಪಾಲಿಸಿ ಚುನಾವಣೆ ನಡೆಸಿಕೊಡಬೇಕಾದ ಪರಿಸ್ಥಿತಿಯು ಇದ್ದು ವಯೋವೃದ್ಧರು ಬೂತ್‍ಗೆ ಬಂದು ಮತದಾನ ಮಾಡುವ ಬದಲು ಬೂತ್‍ಗೆ ಬರದೆಯೇ ಮತದಾನ ಮಾಡುವ ಅವಕಾಶ ಮಾಡಿಕೊಡಬೇಕಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

80 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ದೈಹಿಕ ಅಶಕ್ತತೆ ಇರುವವರಿಗೆ ಪೋಸ್ಟಲ್ ಮತದಾನ ಅನುಮತಿಸಿ 2019 ಅಕ್ಟೋಬರ್‌ನಲ್ಲಿ ಚುನಾವಣಾ ಆಯೋಗ ನಿಬಂಧನೆಗಳಿಗೆ ತಿದ್ದುಪಡಿ ತಂದಿತ್ತು. ಹೊಸ ನಿರ್ದೇಶ ಅಂಗೀಕಾರಗೊಂಡರೆ ಇದಕ್ಕೆ ಸಂಬಂಧಿಸಿದ ಪ್ರಕಟಣೆಯನ್ನು ಹೊರಡಿಸಲಾಗುವುದು ಎಂದು ಆಯುಕ್ತರು ತಿಳಿಸಿದರು. ಮತಗಟ್ಟೆಗೆ ಬರಲು ಸಾಧ್ಯವಿಲ್ಲದ ಮತದಾರರನ್ನು ವಿಶೇಷ ವಿಭಾಗವೆಂದು ಪರಿಗಣಿಸಿ ಪೋಸ್ಟಲ್ ಮತದಾನಕ್ಕೆ ಅನುಮತಿ ನೀಡಲು ಚುನಾವಣಾ ಆಯೋಗ ತೀರ್ಮಾನಿಸಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.