ದೆಹಲಿ ಹಿಂಸಾಚಾರ: ರಾಷ್ಟ್ರಗೀತೆ ಹಾಡಿಸಿದ ಪ್ರಕರಣಕ್ಕೆ ಹೊಸ ತಿರುವು, ಪೊಲೀಸರಿಂದ ಥಳಿತಕ್ಕೊಳಗಾದ ಓರ್ವನ ಸಾವು: ಪ್ರಕರಣವನ್ನೇ ಮುಚ್ಚಿ ಹಾಕಿದ ಪೊಲೀಸರು! -ವಿಡಿಯೋ

0
2073

ಸನ್ಮಾರ್ಗ ವಾರ್ತೆ

ರಾಷ್ಟ್ರಗೀತೆ ಹಾಡಿಸಿದ ವಿಡಿಯೋ ಪ್ರಕರಣಕ್ಕೆ ಹೊಸ ತಿರುವು

ದೆಹಲಿ,ಜೂ.24: ದೆಹಲಿ ಹಿಂಸಾಚಾರದ ಸಮಯದಲ್ಲಿ ‘ರಾಷ್ಟ್ರಗೀತೆ’ ಹಾಡುವಂತೆ ಪೊಲೀಸರು ಐವರನ್ನು ಥಳಿಸಿ ಚಿತ್ರಿಸಿದ ವಿಡಿಯೋ ಪ್ರಕರಣಕ್ಕೆ ಇದೀಗ ಹೊಸ ತಿರುವು ಪಡೆದಿದೆ. ಪೊಲೀಸರ ಬರ್ಬರ ಥಳಿತದಿಂದ ಗಂಭೀರ ಗಾಯಗೊಂಡಿದ್ದ ಫೈಝಾನ್ ಎಂಬ 24 ವರ್ಷದ ಯುವಕನು ಸಾವನ್ನಪ್ಪಿದ್ದು, ಈ ಘಟನೆಯಲ್ಲಿ ಪೊಲೀಸರು ತನ್ನ ಪಾತ್ರವನ್ನು ಹೇಗೆ ಸಮಾಧಿ ಮಾಡಿದ್ದಾರೆ ಎಂಬುದನ್ನು ಎನ್‌ಡಿ‌ಟಿವಿ ರಿಯಾಲಿಟಿ ಚೆಕ್ ಸರಣಿ ವಿಡಿಯೋದಲ್ಲಿ ಬಹಿರಂಗ ಪಡಿಸಿದೆ‌.

ಈ ಘಟನೆ ಸಂದು ನಾಲ್ಕು ತಿಂಗಳಾದರೂ ಯಾವುದೇ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಲಾಗಿಲ್ಲ ಅಲ್ಲದೇ ಈ ಕುರಿತು ತನಿಖೆಯೂ ನಡೆದಿಲ್ಲ. ದೆಹಲಿ ಹಿಂಸಾಚಾರದ ಸಮಯದಲ್ಲಿ ಐವರನ್ನು ಪೊಲೀಸರು ಥಳಿಸುವ ವಿಡಿಯೋ ಒಂದು ವೈರಲ್ ಆಗಿತ್ತು. ಇದರಲ್ಲಿ “ಆಝಾದಿ’ ಎಂದು ಹೇಳುತ್ತಾ ಓರ್ವನ ತಲೆ ಕೂದಲನ್ನು ಹಿಡಿದು ಪೊಲೀಸ್ ಅಧಿಕಾರಿಯನ್ನು ಕಾಣಬಹುದು ಅಲ್ಲದೇ, ಲಾಠಿಗಳಿಂದ ಇತರರನ್ನು ತಿವಿದು ಹೊಡೆಯುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿತ್ತು. ಇದೇ ಘಟನೆಗೆ ಸಂಬಂಧಿಸಿದಂತೆ ಯಾರೋ ಓರ್ವರು ದೂರದಿಂದ ಚಿತ್ರಿಸಿದ ವಿಡಿಯೋವನ್ನು ಇದೇ ಘಟನೆಯೆಂಬುದಾಗಿ ಅಲ್ಟ್ ನ್ಯೂಸ್ ದೃಢಪಡಿಸಿತ್ತು.

ಎರಡನೆಯ ವಿಡಿಯೋದಲ್ಲಿ ಸುಮಾರು ಎಂಟು ಜನ ಸಜ್ಜಿತ ಪೋಲಿಸರು ನೆಲದಲ್ಲಿ ಬಿದ್ದುಕೊಂಡಿದ್ದ ಐವರನ್ನು ಥಳಿಸುವ ಹಾಗೂ ಒದೆಯುವುದನ್ನು ಕಾಣಬಹುದಾಗಿದೆ. ಆದರೆ, ಘಟನೆ ಸಂಭವಿಸಿದ ಎರಡು ದಿನಗಳ ಬಳಿಕ ತೀವ್ರಗಾಯಗೊಂಡಿದ್ದ ಫೈಝಾನ್ ಮೃತಪಟ್ಟಿದ್ದು ಆತನ ತಾಯಿ ಈಗಲೂ ಈ ಆಘಾತದಿಂದ ಹೊರಬಂದಿಲ್ಲ‌ ಎಂದು ವರದಿಯು ಹೇಳಿದೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.