ಚೆನ್ನೈ: 227 ಕೊರೋನ ಸೋಂಕಿತರು ನಾಪತ್ತೆ!

0
510

ಸನ್ಮಾರ್ಗ ವಾರ್ತೆ

ಚೆನ್ನೈ,ಜು.7: ನಗರದಲ್ಲಿ 227 ಕೊರೋನ ರೋಗಿಗಳು ಕಾಣೆಯಾಗಿದ್ದಾರೆಂದು ಕಾರ್ಪೊರೇಷನ್ ಕಮಿಶನರ್ ಜಿ.ಪ್ರಕಾಶ್ ದೃಢಪಡಿಸಿದ್ದು ರೋಗಿಗಳು ಹೆಸರು, ವಿಳಾಸವನ್ನು ಸರಿಯಾಗಿ ನೀಡದಿರುವುದು ಇದಕ್ಕೆ ಕಾರಣವೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೂನ್ 10ರ ವರೆಗೆ 277 ಮಂದಿ, ಹಾಗೂ ಜೂನ್ 10 ರಿಂದ ಜುಲೈ 5 ವರೆಗೆ 196 ಮಂದಿ ಕಾಣೆಯಾಗಿದ್ದಾರೆ. ಈ 473 ಮಂದಿಯಲ್ಲಿ 246 ಮಂದಿಯನ್ನು ಹುಡುಕಿ ಕಂಡು ಹಿಡಿಯಲಾಗಿದೆ. ಉಳಿದವರಿಗಾಗಿ ಕಾರ್ಪೊರೇಷನ್ ಅಧಿಕಾರಿಗಳು ಹುಡುಕಾಟ ಮುಂದುವರಿಸಿದ್ದಾರೆ.

ಚೆನ್ನೈ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ರೋಗ ಪೀಡಿತರ ಸಂಖ್ಯೆಯಲ್ಲಿ ಗಣನೀಯ ಕಡಿಮೆ ಆಗಿದೆ. ಚೆನ್ನೈಯಲ್ಲಿ 14,890 ಮಂದಿ ಕೊರೋನ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಅವರು ತಿಳಿಸಿದರು ಪ್ರತಿದಿನ ಸರಾಸರಿ 11,000 ಸ್ಯಾಂಪಲ್‍ಗಳನ್ನು ಪರಿಕ್ಷಿಸಲಾಗುತ್ತಿದೆ. 450 ಜ್ವರದ ಕ್ಲಿನಿಕ್‍ಗಳ ಮೂಲಕ 30,000ದಷ್ಟು ಮಂದಿಯ ತಪಾಸಣೆ ನಡೆಯುತ್ತಿದೆ ಎಂದು ಕಮಿಶನರ್ ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.