ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜು.7: ಕೊರೋನ ಹಿನ್ನೆಲೆಯಲ್ಲಿ 65 ವರ್ಷದ ಮೇಲ್ಪಟ್ಟವರಿಗೆ ಅಂಚೆ ಬ್ಯಾಲಟ್ ಸೌಕರ್ಯ ಒದಗಿಸುವ ಚುನಾವಣಾ ಆಯೋಗದ ವಿರುದ್ಧ ರಾಜಕೀಯ ಪಾರ್ಟಿಗಳು ರಂಗಪ್ರವೇಶಿಸಿದ್ದು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಎಂ, ಸಿಪಿಐ ಮುಖ್ಯ ಚುನಾವಣಾ ಆಯುಕ್ತರಿಗೆ ವಿರೋಧ ವ್ಯಕ್ತಪಡಿಸಿ ಪತ್ರ ಬರೆದಿದೆ.
ಆಯೋಗದ ತೀರ್ಮಾನ ಪ್ರಜಾಪ್ರಭುತ್ವವನ್ನು ಅಪಾಯಕ್ಕೊಡುವುದು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಡಿ.ರಾಜಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರರಿಗೆ ಪತ್ರದಲ್ಲಿ ನಿವೇದಿಸಿಕೊಂಡಿದ್ದಾರೆ.
ಬಿಹಾರದ ಚುನಾವಣೆಯಲ್ಲಿ ಪೋಸ್ಟಲ್ ಬ್ಯಾಲೆಟ್ ಸೌಕರ್ಯ, ಡಿಜಿಟಲ್ ಚುನಾವಣಾ ಪ್ರಚಾರ ಚುನಾವಣಾ ವಿಧಾನವನ್ನು ಆಯೋಗ ನಿರ್ದೇಶಿಸಿದ್ದು, ಅದನ್ನು ಮೊದಲು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿಯವರು ಮೊದಲು ವಿರೋಧಿಸಿದ್ದರು.
ಇದೇ ವೇಳೆ, ಕೊರೋನ ಮಹಾಮಾರಿಯ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಆಯೋಗ ತಿಳಿಸಿದ್ದು, ಕೊರೋನ ಹೆಚ್ಚು ಮಂದಿಗೆ ಅಂಟಬಹುದು ಜೊತೆಗೆ ಅವರ ಮತದಾನದ ಹಕ್ಕು ನಷ್ಟವಾಗಬಹುದು. ಇದನ್ನು ತಡೆಯಲು ಚುನಾವಣಾ ಆಯೋಗ ಈ ತೀರ್ಮಾನಕ್ಕೆ ಬಂದಿದೆ. ಬಿಹಾರ ಚುನಾವಣೆಯ ಮೊದಲು ಎಲ್ಲ ರಾಜಕೀಯ ಪಾರ್ಟಿಗಳೊಂದಿಗೆ ಚರ್ಚಿಸಿದ ಬಳಿಕವೇ ಅಧಿಕೃತ ತೀರ್ಮಾನ ಹೊರಬರಲಿದೆ.
65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವೈರಸ್ ಬೇಗನೇ ಹರಡಬಹುದು ಎಂಬ ಕಾರಣಕ್ಕಾಗಿ ಪೋಸ್ಟಲ್ ಬ್ಯಾಲೆಟ್ ಗಾಗಿ ನಿಯಮದಲ್ಲಿ ತಿದ್ದುಪಡಿ ಮಾಡಿ ಕೇಂದ್ರ ಕಾನೂನು ಸಚಿವಾಲಯ ಪ್ರಕಟಣೆ ಹೊರಡಿಸಿತ್ತು.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












