ಉಯಿಘುರ್ ಮುಸ್ಲಿಮರ ಮೇಲೆ ದೌರ್ಜನ್ಯ: ಚೀನಾದ ಕಮ್ಯೂನಿಸ್ಟ್ ನಾಯಕರನ್ನು ಕಪ್ಪು ಪಟ್ಟಿಗೆ ಸೇರಿಸಿದ ಅಮೆರಿಕ

0
655

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಜು.10: ಚೀನದ ಕಮ್ಯೂನಿಸ್ಟ್ ಪಾರ್ಟಿಯ ಪೊಲಿಟ್‍ ಬ್ಯೂರೊ ಸದಸ್ಯ ಚೆನ್ ಕ್ವಾಂಗೊ ವಿರುದ್ಧ ಅಮೆರಿಕ ನಿಷೇಧ ಹೇರಿದೆ. ಕ್ವಾಂಗೊ ಸಹಿತ ನಾಲ್ವರು ಕಮ್ಯುನಿಸ್ಟ್ ನಾಯಕರ ವಿರುದ್ಧ ಅಮೆರಿಕ ನಿಷೇಧ ಹೇರಿತು. ಉಯಿಘುರ್ ಮುಸ್ಲಿಮರ ವಿರುದ್ಧ ಮಾನವ ಹಕ್ಕು ಉಲ್ಲಂಘನೆಯ ಹೆಸರಿನಲ್ಲಿ ಕ್ರಮ ಜರಗಿಸಲಾಗಿದೆ.

ಅಮೆರಿಕದ ಅಧಿಕಾರಿಗಳು ಇವರನ್ನು ಕಪ್ಪು ಪಟ್ಟಿಗೆ ಸೇರಿಸಲಿದ್ದಾರೆ. ಶಿಂಜಿಯಾಂಗ್‍ನ ಡೆಪ್ಯೂಟಿ ಪಾರ್ಟಿ ಸೆಕ್ರಟರಿ ಸಾಹು ಹಾಲುನ್, ಕಮ್ಯುನಿಸ್ಟ್ ಪಾರ್ಟಿ ಕಾರ್ಯದರ್ಶಿ ವಾಂಗ್ ಮಿಂಗ್ಸಾನ್, ಮಾಜಿ ಕಾರ್ಯದರ್ಶಿ ಹುವೊಲಿಜುಯುನ್‍ರಿಗೆ ನಿಷೇಧ ಹೇರಲಾಗಿದೆ. ಶಿಂಜಿಯಾಂಗ್ ವಲಯದಲ್ಲಿ ತಮ್ಮ ಪ್ರಜೆಗಳಾದ ಉಯಿಗಘರ್ ಮುಸ್ಲಿಮರ ವಿರುದ್ಧ ಚೀನದ ಕಮ್ಯುನಿಸ್ಟ್ ಪಾರ್ಟಿ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಜಗತ್ತು ಒಗ್ಗೂಡಬೇಕೆಂದು ಅಮೆರಿಕ ಹೇಳಿದೆ.

ಉಯಿಘುರ್ ಮುಸ್ಲಿಮರನ್ನು ಏಕಾಂತ ಜೈಲಿನಲ್ಲಿರಿಸಿ ಬಲವಂತಪಡಿಸಿ ಕೆಲಸ, ಮತಾಂತರ, ಭ್ರೂಣ ಹತ್ಯೆ ಮಾಡಲಾಗುತ್ತಿದೆ ಎಂದು ಅಮೆರಿಕ ಆರೋಪಿಸಿತು.

ಶಿಂಜಿಯಾಂಗ್ ಪ್ರದೇಶದಲ್ಲಿ ಉಯಿಘುರ್ ಮುಸ್ಲಿಮರ ವಿರುದ್ಧ ಕ್ರೌರ್ಯಗಳ ಕುರಿತು ವರದಿಗಳು ಈ ಹಿಂದೆಯೂ ಹೊರ ಬಂದಿತ್ತು. ಇದೇ ವೇಳೆ ದಿಗ್ಬಂಧನ ವಿಧಿಸುವ ತೀರ್ಮಾನದ ಕುರಿತು ಅಮೆರಿಕದ ಚೈನಿಸ್ ಧೂತವಾಸ ಇದುವರೆಗೆ ಅಧಿಕೃವಾಗಿ ಏನೂ ಹೇಳಿಲ್ಲ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.