ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜು.10: ಕುಪ್ರಸಿದ್ಧ ಗ್ಯಾಂಗ್ಸ್ಟರ್ ವಿಕಾಸ್ ದುಬೆ ಎನ್ಕೌಂಟರ್ನಲ್ಲಿ ಹತ್ಯೆಯಾದ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಾತಾಡಿದ್ದು, ಕ್ರಿಮಿನಲ್ ಕೊಲ್ಲಲ್ಪಟ್ಟ; ಆದರೆ ಅವನಿಗೆ ಸಹಾಯ ಮಾಡಿದವರ ವಿಷಯದಲ್ಲಿ ಯಾವ ಕ್ರಮ ಕೈಗೊಳ್ಳುವಿರಿ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.
ಜುಲೈ ಮೂರಕ್ಕೆ ಕಾನ್ಪುರದ ಬಳಿ ಬಿಕ್ರುಗ್ರಾಮದಲ್ಲಿ ದುಬೆಯ ತಂಡ ಒಬ್ಬ ಡಿಸಿಪಿ ಸಹಿತ ಎಂಟು ಪೊಲೀಸರನ್ನು ಕೊಲೆ ಮಾಡಿದೆ. ಐವತ್ತಕ್ಕೂ ಹೆಚ್ಚು ಕ್ರಿಮಿನಲ್ ಕೇಸು ದುಬೆಯ ಮೇಲಿತ್ತು. ದುಬೆಗೆ ಸಂರಕ್ಷಣೆಯನ್ನು ರಾಜಕೀಯ ನಾಯಕರು ಮತ್ತು ಆಡಳಿತ ಪಕ್ಷದ ಉನ್ನತರು ಸಂರಕ್ಷಣೆ ನೀಡಿದ್ದರೆಂಬ ಆರೋಪ ಬಲವಾಗಿ ಕೇಳಿಸುತ್ತಿದೆ.
“ಪೊಲೀಸರನ್ನು ಕೊಂದ ಬಳಿಕ ಅಡಗಿಕೊಂಡಿದ್ದ ವಿಕಾಸ್ ದುಬೆ ಮಧ್ಯಪ್ರದೇಶದ ಉಜ್ಜಯಿನಿಯಿಂದ ಪೊಲೀಸರು ಬಂಧಿಸಿದ್ದಾರೆ. ದುಬೆ ಸಂಚರಿಸುತ್ತಿದ್ದ ಪೊಲೀಸ್ ವಾಹನ ಅಪಘಾತಕ್ಕೊಳಗಾಗಿ ಆತ ಓಡಿ ಹೋಗಲು ನೋಡಿದಾಗ ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ವರದಿಯಾಗಿತ್ತು.
ಕಾನ್ಪುರದ ಪೊಲೀಸರ ಹತ್ಯೆಯಲ್ಲಿ ಜಾಗರೂಕವಾಗಿ ಕೆಲಸ ಮಾಡಲು ಉತ್ತರಪ್ರದೇಶ ಪೊಲೀಸರು ಸಂಪೂರ್ಣ ವಿಫಲರಾದರು. ಎಂದು ಮುನ್ನೆಚ್ಚರಿಕೆ ಇದ್ದೂ ಗೂಂಡಾ ಮುಖ್ಯಸ್ಥ ಉಜ್ಜೈನಿಗೆ ತಲುಪಿದ್ದು ಭದ್ರತಾ ಲೋಪ ಮತ್ತು ಗೂಢಲೋಚನೆಯ ಫಲದಿಂದಾಗಿದೆ ಎಂದು ಪ್ರಿಯಾಂಕ ಕಳೆದ ದಿವಸ ಟ್ವೀಟ್ ಮಾಡಿದ್ದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












