ದೇಶದಲ್ಲಿ ಮತ್ತೆ ಡೀಸೆಲ್ ದರ ಏರಿಕೆ

0
476

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜು.15: ದೇಶದಲ್ಲಿ ಡೀಸೆಲ್ ಬೆಲೆ ಪುನಃ ಹೆಚ್ಚಿದೆ. ಲೀಟರ್‌ಗೆ 13 ಪೈಸೆ ಇಂದು ಹೆಚ್ಚಳವಾಗಿದೆ. ಇದರೊಂದಿಗೆ ಡೀಸೆಲ್ 76 ರೂಪಾಯಿ 80 ಪೈಸೆಯಾಗಿದೆ. ಲಾಕ್‍ಡೌನ್ ನಿಯಂತ್ರಣಗಳಲ್ಲಿ ಸಡಿಲಿಕೆಯಾದ ಬಳಿಕ ಡೀಸೆಲ್‍ಗೆ 11ರೂಪಾಯಿ 24 ಪೈಸೆ ಹೆಚ್ಚಳವಾಗಿದೆ. ಇದೇ ವೇಳೆ, ಪೆಟ್ರೋಲ್ ದರ ಸ್ಥಿರವಾಗಿದೆ. ಪ್ರಸ್ತುತ ಪೆಟ್ರೋಲ್ ಲೀಟರ್‌ಗೆ 80.59 ರೂಪಾಯಿ ಇದೆ.

ದೇಶದ ರಾಜಧಾನಿಯಲ್ಲಿ ಪೆಟ್ರೋಲ್ ದರಕ್ಕಿಂತಲೂ ಡೀಸೆಲ್ ಬೆಲೆ ಏರಿಕೆ ಕಂಡಿದೆ. ಹೊಸದಿಲ್ಲಿಯಲ್ಲಿ ಡೀಸೆಲ್ ಲೀಟರ್‌ಗೆ 81ರೂಪಾಯಿ 18 ಪೈಸೆಯಾಗಿದ್ದು ಪೆಟ್ರೋಲಿಗೆ 80 ರೂಪಾಯಿ 43 ಪೈಸೆಯಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.