ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಜು.15: ಹಾಂಕಾಂಗಿಗೆ ನೀಡಲಾಗಿದ್ದ ವಿಶೇಷ ಪರಿಗಣನೆಯನ್ನು ಅಮೆರಿಕ ರದ್ದುಪಡಿಸುವ ಮಸೂದೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಚೀನಕ್ಕೆ ಕೊಡುತ್ತಿರುವ ಅದೇ ಪರಿಗಣನೆ ಇನ್ನು ಹಾಂಕಾಂಗ್ಗೆ ಎಂದು ಟ್ರಂಪ್ ತಿಳಿಸಿದರು. ಚೀನದ ವಿರುದ್ಧ ಈ ಕ್ರಮದಿಂದ ಅಮೆರಿಕ ಬೀಜಿಂಗ್ ನಡುವಿನ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸಲಿದೆ.
ಹಾಂಕಾಂಗ್ ನಿಯಂತ್ರಣಕ್ಕಾಗಿ ಚೀನ ತಂದಿರುವ ಸೆಕ್ಯೂರಿಟಿ ಬಿಲ್ ಅನ್ನು ಬೆಂಬಲಿಸುವ ಅಧಿಕಾರಿಗಳಿಗೂ ಕಂಪೆನಿಗಳಿಗೂ ದಿಗ್ಬಂಧನ ಹೇರುವ ಮಸೂದೆಗೂ ಅಧ್ಯಕ್ಷರು ಸಹಿ ಹಾಕಿದರು.
ವಿಶೇಷ ಪರಿಗಣನೆಯಾಗಲಿ, ಆರ್ಥಿಕ ಸಹಾಯವಾಗಲಿ ಹಾಗೂ ತಂತ್ರಜ್ಞಾನ ಹಸ್ತಾಂತರವಾಗಲಿ ಹಾಕಾಂಗಿರುವುದಿಲ್ಲ ಎಂದು ಟ್ರಂಪ್ ತಿಳಿಸಿದರು. ಜೊ ಬೆಡನ್, ಬಾರಕ್ ಒಬಾಮ ಅಮೆರಿಕದ ಸಂಪತ್ತನ್ನು ಕೊಳ್ಳೆ ಹೊಡೆಯಲು ಚೀನಕ್ಕೆ ಅವಕಾಶ ನೀಡಿದ್ದರು. ತಾನು ಅದನ್ನು ಕೊನೆಗೊಳಿಸಿದ್ದೇನೆ ಎಂದು ಟ್ರಂಪ್ ತಿಳಿಸಿದರು.
ಬ್ರಿಟಿಷ್ ಕಾಲನಿ ಆಗಿದ್ದ ಹಾಂಕಾಂಗ್ ಚೀನದ ಅಧೀನದಲ್ಲಿದ್ದರೂ ಚೀನಾಕ್ಕೆ ಅಡೆತಡೆಯಾಗಿದ್ದ ಹಲವು ನಿಯಂತ್ರಣಗಳಿಲ್ಲದ ಸ್ವಂತಂತ್ರ ಆಡಳಿತವನ್ನು ಈ ಹಿಂದೆ ಹೊಂದಿತ್ತು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












