ಸನ್ಮಾರ್ಗ ವಾರ್ತೆ
ಟೆಲ್ ಅವೀವ್,ಜು.15: ಫೆಲಸ್ತೀನ್ ಬೆಂಬಲಿಸಿ ಅಂಗಡಿ ಮುಂದೆ ಬೋರ್ಡು ಹಾಕಿದ್ದಕ್ಕೆ ಕೆನಡಾದಲ್ಲಿ ಹೋಟೆಲ್ ಮೇಲೆ ತೀವ್ರವಾದಿ ಯಹೂದಿಗಳು ದಾಳಿ ಮಾಡಿದ್ದಾರೆ. ಜ್ಯೂವಿಷ್ ಡಿಫೆನ್ಸ್ ಲೀಗ್ (ಜೆಡಿಎಲ್) ಎಂಬ ಯಹೂದಿ ತೀವ್ರವಾದಿ ಸಂಘಟನೆಯಿಂದ ಬೆದರಿಕೆ ಮತ್ತು ದ್ವೇಷ ಪ್ರಚಾರ ನಡೆದಿತ್ತು.
ಜನಾಂಗೀಯ ವಿರೋಧಿ ನಿಲುವು ಸ್ವೀಕರಿಸಿ, ಫೆಲಸ್ತೀನಿಯರಿಗೆ ಬಹಿರಂಗ ಬೆಂಬಲ ಸೂಚಿಸಿದ ಟೊರೊಂಟೊದ ಒಂದು ಹೊಟೇಲ್ ಮೇಲೆ ಯಹೂದಿ ತೀವ್ರವಾದಿಗಳು ದಾಂಧಲೆಗೈದರು
ರೆಸ್ಟೋರೆಂಟ್ನ್ನು ಪುಡಿಗುಟ್ಟಲು, ಹಾಗೂ ಒಳ ನುಗ್ಗಲು ತೀವ್ರವಾದಿಗಳು ಗುಂಪುಗುಂಪಾಗಿ ಬೀದಿಗಿಳಿದರು.
ಪ್ರತಿಭಟನೆ ಹಿಂಸಾತ್ಮಕ ಹಂತಕ್ಕೆ ಬರುವ ಮುನ್ನವೇ ಪೊಲೀಸರು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಕೆನಡಾದ ಮುಖ್ಯ ಇಸ್ರೇಲಿ ಬೆಂಬಲಿತ ಲಾಬಿ ಜೆಡಿಎಲ್ ಆಗಿದ್ದು, ಹೊಟೇಲ್ನ ಮುಂದೆ ಹೇಟ್ ಫೆಸ್ಟ್ ಎಂಬ ಹೆಸರಿನಲ್ಲಿ ಅಭಿಯಾನ ನಡೆಸಿತಲ್ಲದೇ ಬಾಗಿಲ ಬಳಿ ರಸ್ತೆಯುದ್ದಕ್ಕೂ ಬರೆಯಲಾಗಿತ್ತು. ಅಲ್ಲದೇ, ಹೊಟೇಲ್ ಅನ್ನು ಬೆಂಕಿಯಿಟ್ಟು ನಾಶಪಡಿಸುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಲಾಗಿತ್ತು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












