ನನ್ನ ಸಂಬಂಧ ಕಾಂಗ್ರೆಸ್ ಆದರ್ಶದೊಂದಿಗೆ, ವ್ಯಕ್ತಿಯೊಂದಿಗೊ ಕುಟುಂಬದೊಂದಿಗೋ ಅಲ್ಲ- ಸಂಜಯ್ ಝಾ

0
531

ಸನ್ಮಾರ್ಗ ವಾರ್ತೆ

ಮುಂಬೈ,ಜು.15: ಪಾರ್ಟಿ ವಿರುದ್ಧ ಚಟುವಟಿಕೆ ಆರೋಪದಲ್ಲಿ ಅಮಾನತಿನಲ್ಲಾಗಿರುವ ಕಾಂಗ್ರೆಸ್ ವಕ್ತಾರ ಸಂಜಯ್ ಝಾ ನನ್ನ ಸಂಬಂಧ ಕಾಂಗ್ರೆಸ್ಸಿನ ಆದರ್ಶದೊಂದಿಗಾಗಿದೆ; ಯಾವುದೋ ಕುಟುಂಬ ಅಥವಾ ಪಾರ್ಟಿಯೊಂದಿಗಲ್ಲ. ಪಾರ್ಟಿಯಿಂದ ಕಳೆದು ಹೋಗುತ್ತಿರುವ ಗಾಂಧಿ, ನೆಹರೂ ಆದರ್ಶ ನನ್ನದು. ಪಾರ್ಟಿಯನ್ನು ಪುನಃ ಜೀವಂತವಿರಿಸಲು ಪ್ರಶ್ನೆಗಳನ್ನೆತ್ತುವುದು ಮುಂದುರಿಸುವೆ. ಯುದ್ಧ ಆರಂಭಿಸಿದ್ದೇ ಈಗ ಎಂದು ಸಂಜಯ್ ಝಾ ಟ್ವೀಟ್ ಮಾಡಿದರು.

ಅವರು ಸಚಿನ್ ಪೈಲಟ್‍ರನ್ನು ಬೆಂಬಲಿಸಿ ಚ್ಯಾನೆಲ್ ಚರ್ಚೆಯಲ್ಲಿ ಮಾತಾಡಿದ್ದರು. ಈ ತಪ್ಪಿಗಾಗಿ ಅವರನ್ನು ಕಾಂಗ್ರೆಸ್‍ನಿಂದ ಅಮಾನತುಗೊಳಿಸಲಾಗಿದೆ ಎಂದು ಮಹಾರಾಷ್ಟ್ರ ಪಿಸಿಸಿ ಅಧ್ಯಕ್ಷ ಬಾಲಾ ಸಾಹೇಬ್ ತೋರಟ್ ಹೇಳಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.