ಮಧ್ಯಪ್ರದೇಶ: ದಲಿತ ದಂಪತಿಯ ಮೇಲೆ ಪೊಲೀಸರ ದೌರ್ಜನ್ಯ: ರಾಹುಲ್ ಗಾಂಧಿ ಖಂಡನೆ

0
896

ಸನ್ಮಾರ್ಗ ವಾರ್ತೆ

ನವದೆಹಲಿ,ಜು.16: ಮಧ್ಯಪ್ರದೇಶದ ಗುನಾದಲ್ಲಿ ದಲಿತ ದಂಪತಿಯನ್ನು ಪೊಲೀಸರು ಥಳಿಸಿದ ಘಟನೆಯು ದೇಶದಾದ್ಯಂತ ಖಂಡನೆಗೊಳಗಾಗುತ್ತಿದೆ. ಘಟನೆ ನಡೆದ ಎರಡು ದಿನಗಳ ನಂತರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಟ್ವಿಟರ್ ಮೂಲಕ ಈ ಘಟನೆಯನ್ನು ಖಂಡಿಸಿದ್ದು, “ನಮ್ಮ ಹೋರಾಟವು ಈ ಆಲೋಚನೆ ಮತ್ತು ಅನ್ಯಾಯಕ್ಕೆ ವಿರುದ್ಧವಾಗಿದೆ” ಎಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ಘಟನೆ ಮಂಗಳವಾರದ್ದಾಗಿದೆ. ಗುನಾದಲ್ಲಿ ಸರ್ಕಾರಿ ಭೂಮಿಯನ್ನು ಆಕ್ರಮಿಸದಂತೆ ಕಾರ್ಯಾಚರಣೆ ನಡೆಸಲು ಹೋಗಿದ್ದ ಪೊಲೀಸ್ ತಂಎದ ನಡೆಯನ್ನು ದಂಪತಿಗಳು ಪ್ರತಿಭಟಿಸಿ ತಡೆಯಲು ನೋಡಿದರು. ಈ ಸಂದರ್ಭದಲ್ಲಿ ಪೊಲೀಸ್ ತಂಡವು ದಲಿತ ಗಂಡ ಮತ್ತು ಹೆಂಡತಿಯನ್ನು ಥಳಿಸಿತ್ತು.

ಜೆಸಿಬಿಯಿಂದ ಹೊಲದಲ್ಲಿ ಬೆಳೆದಿರುವ ಬೆಳೆಯು ನಾಶವಾಗುವುದನ್ನು ಅವರು ವಿರೋಧಿಸಿದರು. ಅತೃಪ್ತ ಪತಿ ಕೀಟನಾಶಕವನ್ನು ಸೇವಿಸಿದ್ದು, ದಂಪತಿಗೆ 7 ಮಕ್ಕಳಿದ್ದಾರೆ. ಬುಧವಾರ ಪೊಲೀಸರು ದಂಪತಿ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.