ಬಿಹಾರ: ಉದ್ಘಾಟನೆಯಾದ 29 ದಿನಗಳಲ್ಲಿಯೇ 264 ಕೋಟಿ ರೂ. ಸೇತುವೆ ಕೊಚ್ಚಿ ಹೋಯಿತು! ವಿಡಿಯೋ

0
1008

ಬಿಹಾರ,ಜು.16: ಉದ್ಘಾಟನೆಯಾದ 29 ದಿನಗಳ ನಂತರ ಬಿಹಾರದ ಗೋಪಾಲ್‌ಗಂಜ್‌ನ ಬೈಕುಂತ್‌ಪುರದ ಸೇತುವೆ ಕೊಚ್ಚಿ ಹೋಗಿದೆ.

ಗಂಡಕ್‌ನ ಉಪನದಿಯಾದ ಸೋತಿಯಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದ್ದು, ಜೂನ್ 16 ರಂದು ಉದ್ಘಾಟಿಸಲಾಗಿತ್ತು. ಇದರ ವೆಚ್ಚ ಸುಮಾರು 264 ಕೋಟಿ ಎಂದು ಹೇಳಲಾಗಿದೆ.

ಮಳೆಯಿಂದಾಗಿ ಗಂಡಕ್ ನದಿಯ ಹರಿವು ವಿಪರೀತವಾಗಿದೆ. ರಾಷ್ಟ್ರೀಯ ಜನತಾದಳದ ನಾಯಕ ತೇಜಶ್ವಿ ಯಾದವ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದನ್ನು ಭ್ರಷ್ಟಾಚಾರ ಪ್ರಕರಣ ಎಂದು ಕರೆದಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.