ಸನ್ಮಾರ್ಗ ವಾರ್ತೆ
ಮುಂಬೈ, ಜು.17: ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಪಾತ್ರವಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ 2018 ರಿಂದ ಜೈಲಿನಲ್ಲಿರುವ, 79 ವರ್ಷದ ಕವಿ ವರವರ ರಾವ್ ಅವರ ಆರೋಗ್ಯ ಬಿಗಡಾಯಿಸಿರುವುದರ ಕುರಿತ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಗುರುವಾರ ಕೋವಿಡ್-19 ಸೋಂಕು ತಗುಲಿರುವುದು ದೃಢವಾಗಿದೆ.
ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಅವರ ಪಾತ್ರದ ಆರೋಪಕ್ಕೆ ಸಂಬಂಧಿಸಿದಂತೆ 2018 ರಿಂದ ಜೈಲಿನಲ್ಲಿರುವ, 79 ವರ್ಷದ ರಾವ್ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದು, ಇವರೊಂದಿಗೆ ಜೈಲು ಸೇರಿರುವ ಇತರ 10 ಆರೋಪಿಗಳ ಅವರ ಜಾಮೀನು ಅರ್ಜಿಯನ್ನೂ ಕೂಡ ಪದೇ ಪದೇ ತಿರಸ್ಕರಿಸಲಾಗಿದೆ.
ಮೇ ತಿಂಗಳಲ್ಲಿ, ಮುಂಬೈನ ತಾಲೋಜ ಕೇಂದ್ರ ಕಾರಾಗೃಹದಲ್ಲಿ ರಾವ್ ಮತ್ತು ಇತರ ಆರೋಪಿಗಳೊಂದಿಗೆ ಇರಿಸಲಾಗಿದ್ದ ಇಬ್ಬರು ಕೈದಿಗಳು ಮೃತಪಟ್ಟ ಬಳಿಕ ಕೋವಿಡ್ -19 ಸೋಂಕು ಇರುವುದು ದೃಢವಾಗಿತ್ತು.
ರಾವ್ ಅವರನ್ನು ಮೀಸಲಾದ ಕೋವಿಡ್ ಸೌಲಭ್ಯದ ಸೇಂಟ್ ಜಾರ್ಜ್ ಆಸ್ಪತ್ರೆಗೆ ಗುರುವಾರ ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆಯ ಸಹಾಯಕ ಡೀನ್ ರಂಜಿತ್ ಮಾಂಕೇಶ್ವರ್ ದಿ ಟೆಲಿಗ್ರಾಫ್‌ಗೆ ತಿಳಿಸಿದ್ದಾರೆ.
ರಾವ್ ಸ್ವತಃ ನಡೆಯುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದು ಶೌಚಾಲಯಕ್ಕೂ ಕೂಡ ಹೋಗಲು ಆಗದ ಪರಿಸ್ಥಿತಿ ಇದೆ, ಅಲ್ಲದ ವಯೋಸಹಜ ಭ್ರಮಣೆಯ ಪರಿಣಾಮಗಳು ಗೋಚರಿಸುತ್ತಿದೆ ಹಾಗಾಗಿ ಜೈಲಿನ ಆಸ್ಪತ್ರೆಯ ವೈದ್ಯರಿಂದ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದರು. ವ್ಯಾಪಕ ಆಕ್ರೋಶದ ನಂತರ, ರಾವ್ ಅವರನ್ನು ಜೆ.ಜೆ. ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗುತ್ತು.
“ಉದ್ದೇಶಪೂರ್ವಕವಾಗಿ ಮಾರಣಾಂತಿಕ ಹಾನಿ ಮಾಡಲಾಗುತ್ತಿರುವುದಕ್ಕೆ ಅರಕಾರವು ಜವಾಬ್ದಾರಿಯಾಗಿದೆ. ಇದು ಮಾನವೀಯತೆಯ ವಿರುದ್ಧದ ಅಪರಾಧವಲ್ಲದಿದ್ದರೇ ಮತ್ತೇನು ?! ಯುಎಪಿಎ ಅಡಿಯಲ್ಲಿ ಜಾಮೀನು ನಿರಾಕರಿಸಲ್ಪಟ್ಟ ಇತರ ಆರೋಪಿಗಳ ಜೀವಗಳೂ ಗಂಭೀರ ಅಪಾಯದಲ್ಲಿದೆ. ಇದು ಕಸ್ಟಡಿಯಲ್ ಚಿತ್ರಹಿಂಸೆಯಲ್ಲದೇ ಬೇರೆನೂ ಅಲ್ಲ” ಎಂದು ಹೈದರಾಬಾದ್ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತೆ ಕಲ್ಪನಾ ಕಣ್ಣಾಭಿರನ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












