ಸನ್ಮಾರ್ಗ ವಾರ್ತೆ
ವಾರಣಾಸಿ,ಜು.17: ನೇಪಾಳಿ ವ್ಯಕ್ತಿಯೊಬ್ಬನ ತಲೆ ಬೋಳಿಸಿ ನೆತ್ತಿಯ ಮೇಲೆ ‘ಜೈ ಶ್ರೀ ರಾಮ್’ ಎಂದು ಬರೆದು ಬಲವಂತವಾಗಿ ‘ಜೈ ಶ್ರೀ ರಾಮ್,‘ನೇಪಾಳ ಮುರ್ದಾಬಾದ್’, ‘ಒಲಿ ಮುರ್ದಾಬಾದ್’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಲು ಬಲವಂತಪಡಿಸಿದ ಘಟನೆಯು ವಾರಣಾಸಿಯ ರಾಜೇಂದ್ರ ಪ್ರಸಾದ್ ಗಂಗಾ ಘಾಟ್ ಬಳಿ ಗುರುವಾರ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ವಾರಣಾಸಿ ಪೊಲೀಸರು ‘ವಿಶ್ವ ಹಿಂದೂ ಸೇನಾ’ ಎಂಬ ಗುಂಪಿನ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವಾರಣಾಸಿ ಮೂಲದ ಫ್ರಿಂಜ್ ಹಿಂದುತ್ವ ಉಡುಪಿನ ವಿಶ್ವ ಹಿಂದೂ ಸೇನೆಯ ಕನ್ವೀನರ್ ಅರುಣ್ ಪಾಠಕ್ ಈ ಘಟನೆಯನ್ನು ಚಿತ್ರಿಸಿ ವಿಡಿಯೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.
ಫೇಸ್ಬುಕ್ನಲ್ಲಿ, ಗುಂಪಿನೊಂದಿಗಿದ್ದ ಪಾಠಕ್ ಈ ಕೃತ್ಯವನ್ನು ಸಮರ್ಥಿಸಿಕೊಂಡಿದ್ದು ಶ್ರೀ ರಾಮನ ವಿರುದ್ಧ ಮಾತನಾಡಲು ಓಲಿಗೆ ಧೈರ್ಯಬಾರದಂತೆ ಮಾಡಲು “ಇತರ ನೇಪಾಳಿಗಳ ನೆತ್ತಿಯ ಮೇಲೆಯೂ ‘ಜೈ ಶ್ರೀ ರಾಮ್’ ಬರೆಯುವಂತೆ ತಮ್ಮ ಅನುಯಾಯಿಗಳಿಗೆ ಕರೆ ನೀಡಿದ್ದಾನೆ
‘ನೈಜ’ ಅಯೋಧ್ಯೆ ನೇಪಾಳದಲ್ಲಿದೆ ಮತ್ತು ಭಗವಾನ್ ರಾಮ ನೇಪಾಳಿ ಎಂದು ಹೇಳುವ ಮೂಲಕ ನೇಪಾಳ ಪ್ರಧಾನಿ ವಿವಾದಕ್ಕೆ ನಾಂದಿ ಹಾಡಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












