ಅಮೆರಿಕದಲ್ಲಿ ಭಾರತೀಯ ನರ್ಸ್ ಹತ್ಯೆ ಪ್ರಕರಣ: ಪತಿ ಬಂಧನ

0
737

ಸನ್ಮಾರ್ಗ ವಾರ್ತೆ

ಪ್ಲೊರಿಡ,ಜು.29: ಅಮೆರಿಕದಲ್ಲಿ ಭಾರತೀಯ ಮೂಲದ ನರ್ಸ್ ಇರಿದು ಹತ್ಯೆ ಮಾಡಲಾಗಿದ್ದು, ಸೌತ್ ಫ್ಲೊರಿಡಾದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕೇರಳದ ಕೋಟ್ಟಯಂನ ನಿವಾಸಿ ಮೆರಿನ್ ಜೊಯಿ ಮಂಗಳವಾರ ಕೊಲೆಯಾಗಿದ್ದಾರೆ. ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಆಸ್ಪತ್ರೆಯ ಪಾರ್ಕಿಂಗ್ ಏರಿಯದಲ್ಲಿ ಚೂರಿಯಿಂ ಇರಿದು ಕೊಲೆ ಮಾಡಲಾಗಿತ್ತು.

ಪತಿ ಫಿಲಿಫ್ ಮ್ಯಾಥ್ಯೂ ಮೆರಿನ್‍ರನ್ನು ಹದಿನೇಳು ಬಾರಿ ಇರಿದಿದ್ದಾನೆ. ಇರಿತಕ್ಕೊಳಗಾಗಿ ನೆಲಕ್ಕುರುಳಿದ ಮೆರಿನ್‍ರ ದೇಹದ ಮೇಲೆ ಈತ ಕಾರು ‌ಚಲಾಯಿಸಿ ಕ್ರೌರ್ಯವನ್ನು ಎಸಗಿದ್ದಾನೆ. ಘಟನೆಯನ್ನು ನೋಡಿ ಓಡಿ ಬಂದ ಜನರು ಮೆರಿನ್ ಜೋಯಿಯವರನ್ನು ಆಸ್ಪತ್ರೆಗೆ ತಂದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಮೆರಿನ್ ಮತ್ತು ಫಿಲಿಪ್ ಎರಡು ವರ್ಷಗಳಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ದಂಪತಿಗೆ ಹತ್ತು ವರ್ಷದ ಒಂದು ಮಗು ಇದೆ. ಕೊಲೆಗೆ ಕಾರಣವೆನೆಂದು ತಿಳಿದು ಬಂದಿಲ್ಲ.

ಮೆರಿನ್ ಜೋಯಿಯ ಪತಿ ವೆಳಿಯಂಗಾಡಿನ ಫಿಲಿಫ್ ಮ್ಯಾಥ್ಯೂರನ್ನು ಪೊಲೀಸರು ಬಂಧಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.