ಸನ್ಮಾರ್ಗ ವಾರ್ತೆ
ಮುಂಬೈ,ಆ.4:ಸೋಮವಾರ ತಡರಾತ್ರಿಯಿಂದ ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮಂಗಳವಾರ ಬೆಳಿಗ್ಗೆಯಿಂದ ಇದು ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ನಗರದ ತಗ್ಗು ಪ್ರದೇಶಗಳಲ್ಲಿ ಮೊಣಕಾಲುಳೆತ್ತರಕ್ಕೆ ನೀರು ತುಂಬಿವೆ. ಕೆಲಸದ ದಿನದ ಕಾರಣ, ಕಚೇರಿ ಹೋಗುವವರು ನಿರಂತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಂಬೈನಲ್ಲಿ ಹವಾಮಾನ ಇಲಾಖೆ ಇಂದು ಮಳೆಯ ಬಗ್ಗೆ ರೆಡ್ ಅಲರ್ಟ್ ನೀಡಿದೆ. ಎಲ್ಲಾ ಅನಿವಾರ್ಯವಲ್ಲದ ಸರ್ಕಾರಿ ಕಚೇರಿಗಳು ಮತ್ತು ಖಾಸಗಿ ಕಚೇರಿಗಳನ್ನು ಮುಚ್ಚುವಂತೆ ಬಿಎಂಸಿ ಆದೇಶಿಸಿದೆ.
ಮಧ್ಯಾಹ್ನ 12.45ಕ್ಕೆ ಸಮುದ್ರದಲ್ಲಿ ಹೆಚ್ಚಿನ ಉಬ್ಬರವಿಳಿತದ ಬಗ್ಗೆ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದ್ದು, ಈ ಸಮಯದಲ್ಲಿ, ಸಮುದ್ರದಲ್ಲಿ 5 ಮೀಟರ್ ಎತ್ತರದ ಅಲೆಗಳು ಏರಬಹುದು. ಜನರು ಜಾಗರೂಕರಾಗಿರಬೇಕಾಗಿದ್ದು, ಸಮುದ್ರ ತೀರದಿಂದ ದೂರವಿರಲು ಕೇಳಿಕೊಳ್ಳಲಾಗಿದೆ. ಈ ಸಮಯದಲ್ಲಿ ನಗರದಲ್ಲಿ ಮಳೆಯು ಮುಂದುವರಿದರೇ ಪರಿಸ್ಥಿತಿ ತೀವ್ರವಾಗಬಹುದು.
ಮುಂಬೈನಲ್ಲಿ ಹಿಂದೂಮಾತಾ, ದಾದರ್, ಟಿಟಿ ಕಿಂಗ್ಸ್ ಸರ್ಕಲ್, ಸಿಯಾನ್, ಚೆಂಬೂರ್, ಅಂಧೇರಿ, ಸಂತಕ್ರೂಜ್ ಮತ್ತು ಇತರ ತಗ್ಗು ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ. ರಸ್ತೆ ಸಂಚಾರಕ್ಕೂ ತೀವ್ರ ತೊಂದರೆಯಾಗುತ್ತಿದೆ. ಡಾರ್ಕ್ ಅಂಡರ್ ಪಾಸ್ನ್ನು ಮುಚ್ಚಲಾಗಿದೆ. ಕೊಲಾಬಾದಲ್ಲಿ ರಾತ್ರಿ 1 ಗಂಟೆಯವರೆಗೆ ಸುಮಾರು 269 ಮಿ.ಮೀ ಮಳೆ ದಾಖಲಾಗಿದ್ದರೆ, ಉಪನಗರ ಸಾಂತಕ್ರೂಜ್ನಲ್ಲಿ 87 ಮಿ.ಮೀ ಮಳೆಯಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












