ಪ್ಲೀಸ್ ಸಬಕರೈಸ್: ಮಂಗಳೂರಿನ ಪುಟ್ಟ ಹುಡುಗ ಅಬ್ದುರ್ರಹ್ಮಾನ್ ನ ವೀಡಿಯೊ ವೈರಲ್. ಬಾಲಿವುಡ್ ಗಾಯಕ ಅರ್ಮಾನ್ ಮಲಿಕ್ ಮೆಚ್ಚುಗೆ:ಬಬ್ಬುಕಟ್ಟೆ ಹಿರಾ ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿ

0
13096

ಸನ್ಮಾರ್ಗ ವಾರ್ತೆ

ಮಂಗಳೂರು, ಆ. 7: ಮಂಗಳೂರು ಸಮೀಪದ ತೊಕ್ಕೊಟ್ಟಿನ ಪುಟ್ಟ ಹುಡುಗನೊಬ್ಬ ಮಾಡಿದ 33 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೇವಲ ಎರಡೇ ದಿನಗಳಲ್ಲಿ ಈ ವಿಡಿಯೋ 30 ಲಕ್ಷಕ್ಕಿಂತಲೂ ಅಧಿಕ ವೀಕ್ಷಣೆಗೆ ಒಳಗಾಗಿದೆ.

ಸಬ್ಸ್ಕ್ರೈಬ್ ಅನ್ನುವ ಪದವನ್ನು ಉಚ್ಚರಿಸಲಾಗದೆ ಕಷ್ಟಪಡುವ ಮತ್ತು ಸಬಕರೈಸ್ ಎಂದು ಮುಂತಾಗಿ ಉಚ್ಚರಿಸುವ ಈ ಹುಡುಗನ ಹಾವಭಾವ ವೀಕ್ಷಕರ ಮನ ಗೆದ್ದಿದೆ. ಬಾಲಿವುಡ್ ಗಾಯಕ ಅರ್ಮಾನ್ ಮಲಿಕ್ ಸಹಿತ ಸುಮಾರು 4500 ಮಂದಿ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಹಲವು ನಕಲಿ ಯೂ ಟ್ಯೂಬ್ ಚಾನೆಲ್ ಗಳು ಈತನ ಹೆಸರಲ್ಲಿ ಹುಟ್ಟಿಕೊಂಡಿವೆ.

ಮಂಗಳೂರು ಸಮೀಪದ ಬಬ್ಬುಕಟ್ಟೆ ಹಿರಾ ಪ್ರಾಥಮಿಕ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿಯಾಗಿರುವ ಈತನ ಹೆಸರು ಅಬ್ದುರಹ್ಮಾನ್. ತೊಕ್ಕೊಟ್ಟು ಮಂಚಿಲದ ಈ ಪೋರನ ತಾಯಿ ನೂರ್ ಜಹಾನ್ ಶಿಕ್ಷಕಿಯಾಗಿದ್ದಾರೆ. ತಂದೆಯ ಹೆಸರು ಮುಹಮ್ಮದ್ ಸಿದ್ದೀಕ್.


ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.