ಭಾರತೀಯ ಮೂಲದ ಕಮಲ ಹ್ಯಾರಿಸ್ ಡೆಮಕ್ರಾಟಿಕ್ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ

0
471

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಆ.12: ಭಾರತೀಯ ಮೂಲದ ಕಮಲ ಹ್ಯಾರಿಸ್ ಡೆಮಕ್ರಾಟಿಕ್ ಪಾರ್ಟಿಯ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾದ ಜೊ ಬೈಡನ್ ಆಯ್ಕೆ ಮಾಡಿದ್ದಾರೆ.

ಪ್ರಸ್ತುತ ಅವರು ಕ್ಯಾಲಿಫೋರ್ನಿಯದ ಸೆನೆಟರ್ ಆಗಿದ್ದಾರೆ. ಅಮೆರಿಕದ ಪ್ರಧಾನ ಸ್ಥಾನಕ್ಕೆ ಒಂದು ಪ್ರಮುಖ ಪಾರ್ಟಿಯಿಂದ ಸ್ಪರ್ಧಿಸುತ್ತಿರುವ ಮೊದಲ ಭಾರತೀಯ ವಂಶದ ಮಹಿಳೆಯಾಗಿದ್ದಾರೆ.

ದೇಶದ ಸಾರ್ವಜನಿಕ ಕಾರ್ಯಕರ್ತರಲ್ಲಿ ಗಮನಾರ್ಹ ವ್ಯಕ್ತಿ ಮತ್ತು ದಿಟ್ಟ ಹೋರಾಟಗಾರ್ತಿ ಎಂದು ಜೋ ಬೈಡನ್ ಶುಭಾಶಯ ಕೋರಿದ್ದಾರೆ.

ಕಮಲ ಅಭ್ಯರ್ಥಿತ್ವದಲ್ಲಿ ಆಶ್ಚರ್ಯವಿಲ್ಲ. ಅವರ ಪ್ರದರ್ಶನ ತುಂಬ ಕೆಟ್ಟದು ಎಂದು ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಭಾರತ ಮೂಲದ ಮಹಿಳೆ ಪ್ರಧಾನ ಸ್ಥಾನಕ್ಕೆ ಸ್ಪರ್ಧಿಸುವುದನ್ನು ಟ್ರಂಪ್ ರಾಜಕೀಯವಾಗಿ ಉಪಯೋಗಿಸುವ ಸಾಧ್ಯತೆ ಇದೆ.

ಮೂಲತಃ ತಮಿಳು ಕುಟುಂಬದ ಶ್ಯಾಮಲಾ ಗೋಪಾಲ್ ಮತ್ತು ಜಮೈಕದ ಡೊನಾಲ್ಡ್ ಹಾರಿಸ್‍ರ ಪುತ್ರಿ ಕಮಲಾ ಆಗಿದ್ದಾರೆ. ಮೊದಲು ಟ್ರಂಪ್ ವಿರುದ್ಧ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಯಾಗಿ ಕಮಲ ಘೋಷಿಸಿ ನಂತರ ಹಿಂಪಡೆದಿದ್ದರು. ಪ್ರಚಾರಕ್ಕೆ ಫಂಡ್ ಇಲ್ಲ ಎಂದು ಕಾರಣ ಸೂಚಿಸಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.