ಸುಪ್ರೀಂಕೋರ್ಟ್ ಜಡ್ಜ್ ಜಸ್ಟಿಸ್ ಅರುಣ್ ಮಿಶ್ರ ನಿವೃತ್ತ

0
543

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.2: ಸುಪ್ರೀಂಕೋರ್ಟಿನ ಜಡ್ಜ್ ಜಸ್ಟಿಸ್ ಅರುಣ್ ಮಿಶ್ರ ಅಧಿಕೃತ ಸ್ಥಾನದಿಂದ ನಿವೃತ್ತರಾಗಿದ್ದಾರೆ. 2014ರಲ್ಲಿ ಅವರು ಸುಪ್ರೀಂಕೋರ್ಟ್ ಜಡ್ಜ್ ಆಗಿ ನೇಮಕಗೊಂಡಿದ್ದರು.

ಜಸ್ಟಿಸ್ ಎನ್‍.ವಿ.ರಮಣ ರವರ ನಂತರ ಸುಪ್ರೀಂಕೋರ್ಟಿನ ಎರಡನೆ ಹಿರಿಯ ಜಡ್ಜ್ ಅವರಾಗಿದ್ದರು. 20 ವರ್ಷದ ಸುದೀರ್ಘ ವಕೀಲ ವೃತ್ತಿಯ ನಂತರ ಜಸ್ಟಿಸ ಮಿಶ್ರ ಜಡ್ಜ್ ಆದವರು.

1999ರಲ್ಲಿ ಮಧ್ಯಪ್ರದೇಶದ ಹೈಕೋರ್ಟಿನ ಹೆಚ್ಚುವರಿ ಜಸ್ಟಿಸ್ ಆಗಿ ಹೊಣೆ ವಹಿಸಿಕೊಂಡಿದ್ದರು. 2001ರಲ್ಲಿ ಅವರಿಗೆ ಕಾಯಂ ನೇಮಕಾತಿ ಲಭಿಸಿತ್ತು. ಜೊತೆಗೆ ಮಧ್ಯಪ್ರದೇಶದ ಅಡ್ಮಿನಿಸ್ಟ್ರೇಟ್ ಜಡ್ಜ್ ಆದರು.

ನಂತರ ರಾಜಸ್ತಾನ ಹೈಕೋರ್ಟಿಗೆ ಅವರು ವರ್ಗಾವಣೆ ಗೊಂಡರು. 2010 ನವೆಂಬರ್ ಒಂದಕ್ಕೆ ರಾಜಸ್ತಾನದ ಹೈಕೋರ್ಟಿನ ಆಕ್ಟಿಂಗ್‍ಚೀಫ್ ಜಡ್ಜ್ ಆದರು. 2010 ನವೆಂಬರ್ 26ಕ್ಕೆ ಮುಖ್ಯ ಜಡ್ಜ್ ಆದರು. ನಂತರ ಕೊಲ್ಕತಾ ಹೈಕೋರ್ಟಿನ ಚೀಫ್ ಜಸ್ಟಿಸ್ ಆಗಿ ಸೇವೆ ಸಲ್ಲಿಸಿದರು.

ಮಾಜಿ ಐಪಿಎಸ್ ಅಧಿಕಾರಿ ಸಂಜಯ್ ಭಟ್‍ರ ಅರ್ಜಿ, ಜಸ್ಟಿಸ್ ಲೋಯರ ನಿಗೂಢ ಸಾವು, ಸಿಬಿಐ ಮುಖ್ಯಸ್ಥರ ವಿವಾದ, ಹರೇನ್ ಪಾಂಡ್ಯ ಕೊಲೆ ಪ್ರಕರಣ, ಸಹಾರ-ಬಿರ್ಲಾ ಲಂಚ ಹಗರಣ, ವಕೀಲ ಪ್ರಶಾಂತ್ ಭೂಷಣ್ ಆರೋಪಿಯಾದ ಕೋಟು ನಿಂದೆ ಪ್ರಕರಣ, ಯಾಕೋಬಾಯ-ಆರ್ಥೊಡಕ್ಸ್ ವಿವಾದ ಮುಂತಾದ ಹಲವು ಪ್ರಕರಣದಲ್ಲಿ ಅವರು ವಿಚಾರಣೆ ನಡೆಸಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.