SDPI ಕಾರ್ಯಕರ್ತ ಸ್ವಲಾಹುದ್ದೀನ್ ಹತ್ಯೆ ಪ್ರಕರಣ: ಮೂವರು ಆರ್‌ಎಸ್‌ಎಸ್‌ ಕಾರ್ಯಕರ್ತರ ಬಂಧನ

0
805

ಸನ್ಮಾರ್ಗ ವಾರ್ತೆ

ತಿರುವನಂತಪುರ,ಸೆ.10: ಕಣ್ಣೂರಿನಲ್ಲಿ ಮಂಗಳವಾರ ನಡೆದ ಎಸ್‌ಡಿಪಿಐ ಕಾರ್ಯಕರ್ತ ಸಯ್ಯದ್ ಸ್ವಲಾಹುದ್ದೀನ್(30 ವರ್ಷ) ಹತ್ಯೆಗೆ ಸಂಬಂಧಿಸಿ ಪೊಲೀಸರು ಮೂವರು ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಆರ್‌ಎಸ್‌ಎಸ್ ಕಾರ್ಯಕರ್ತರಾದ ಎಮ್. ಅಮಲ್‌ ರಾಜ್ (22), ಪ್ರಬಿನ್ ಪಿ.ಕೆ.(23) ಹಾಗೂ ಅಸೀಕಲಾ ಎಮ್(25) ಎಂಬುದಾಗಿ ಗುರುತಿಸಲಾಗಿದೆ.

ಬಂಧಿತ ಮೂವರು ದಾಳಿಯಲ್ಲಿ ನೇರವಾಗಿ ಭಾಗಿಯಾಗಿಲ್ಲ. ಆದರೆ ಇವರು ಹಂತಕರಿಗೆ ನೆರವಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿ ಹಲವು ವ್ಯಕ್ತಿಗಳನ್ನು ವಿಚಾರಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಸತ್ಯಾಂಶವು ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.