ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.10: ವಿವಾದಾತ್ಮಕ ‘ಯುಪಿಎಸ್‌ಸಿ ಜಿಹಾದ್’ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಸುದರ್ಶನ ಸುದ್ದಿ ಚಾನೆಲ್‌ಗೆ ಕೇಂದ್ರ ಸರಕಾರವು ಗುರುವಾರ ಅನುಮತಿ ನೀಡಿದೆ.
‘ಸರಕಾರಿ ಸೇವೆಗಳಲ್ಲಿ ಮುಸ್ಲಿಮರ ಒಳನುಸುಳುವಿಕೆ ಒಳಸಂಚಿನ ಬಹಿರಂಗ’ ಎಂಬ ಕಾರ್ಯಕ್ರಮದ ಟ್ರೈಲರ್ ಭಾರೀ ವಿವಾದಕ್ಕೆ ಗುರಿಯಾಗಿತ್ತಲ್ಲದೇ, ಹಿರಿಯ ಐಎಎಸ್ ಅಧಿಕಾರಿಗಳು ಸುದರ್ಶನ ಸುದ್ದಿ ಚಾನೆಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.
ಈ ಕಾರ್ಯಕ್ರಮದ ಪ್ರಸಾರಕ್ಕೆ ಅನುಮತಿ ನೀಡಿದ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು, “ಯಾವುದೇ ಕಾರ್ಯಕ್ರಮ ಸಂಹಿತೆಯನ್ನು ಈ ಪ್ರದರ್ಶನ ಉಲ್ಲಂಘಿಸುವುದಿಲ್ಲ ಎಂಬುದಾಗಿ ಖಾತರಿ ನೀಡುವಂತೆ” ಸುದರ್ಶನ್ ಟಿವಿಗೆ ನಿರ್ದೇಶಿಸಿದೆ.
“ಕಾರ್ಯಕ್ರಮ ಸಂಹಿತೆ ಉಲ್ಲಂಘಿಸಿದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು” ಎಂದು ಅದು ಎಚ್ಚರಿಕೆ ನೀಡಿದೆ.
ಕಾರ್ಯಕ್ರಮದ ಟ್ರೈಲರ್, 1995ರ ಕೇಬಲ್ ಟೆಲಿವಿಷನ್ ನೆಟ್‌ವರ್ಕ್(ನಿಯಂತ್ರಣ) ಕಾಯ್ದೆಯನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಇದರ ಪ್ರಸಾರದ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲು ದಿಲ್ಲಿ ಹೈಕೋರ್ಟ್ ನಿರಾಕರಿಸಿತ್ತು.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












