ಸನ್ಮಾರ್ಗ ವಾರ್ತೆ
ದೋಹ, ಸೆ. 29: ಕತರ್ ವಿರುದ್ಧ ನೆರೆಯ ನಾಲ್ಕು ದೇಶಗಳು ದಿಗ್ಬಂಧನ ಹೇರುವ ಮೊದಲು ಕತರ್ ಮೇಲೆ ದಾಳಿ ಮಾಡಲು ಯೋಜನೆ ರೂಪಿಸಿದ್ದವೆಂದು ವರದಿಯೊಂದು ತಿಳಿಸಿದೆ. 2017ರಲ್ಲಿ ಕತರ್ ವಿರುದ್ಧ ಸೌದಿ ಅರೇಬಿಯ, ಯುಎಇ, ಈಜಿಪ್ಟ್, ಬಹ್ರೈನ್ ದಿಗ್ಬಂಧನ ಹೇರಿದ್ದವು. ಇವುಗಳಲ್ಲಿ ಸೌದಿ, ಈಜಿಪ್ಟ್, ಯುಎಇ ಎರಡು ಹಂತದ ದಾಳಿಗೆ ಯೋಜನೆ ರೂಪಿಸಿದ್ದವು ಎಂದು ಕತರ್ ಗೃಹ ಸಚಿವಾಲಯವನ್ನು ಉದ್ಧರಿಸಿ ಅಲ್ಜಝೀರ ವರದಿ ಮಾಡಿದೆ. ಪ್ರಥಮ ಯುದ್ಧ ಕತರ್ ಬೀದಿಗಳಲ್ಲಿ ನೇರ ನಿಯಂತ್ರಣ ಸಾಧಿಸುವುದು. ಎರಡನೆಯದು ಸೇನಾ ಕಾರ್ಯಾಚರಣೆ ಯುದ್ಧವಾಗಿತ್ತು ಎಂದು ಅಲ್ಜಝೀರ ಅರಬಿಕ್ ವಾರ್ತೆ ವರದಿ ಮಾಡಿದೆ.
ನಿಜಕ್ಕೂ ಅದೊಂದು ಬರೇ ಗುರಿ ಮಾತ್ರ ಆಗಿರಲಿಲ್ಲ. ಕತರ್ ಮೇಲೆ ದಾಳಿ ಮಾಡಿ ಶರಣಾಗಿಸುವುದು ಗುರಿಯಾಗಿತ್ತು ಎಂದು ಕತರ್ ರಕ್ಷಣಾ ಸಚಿವ ಖಾಲಿದ್ ಬಿನ್ ಮುಹಮ್ಮದ್ ಅಲ್ಲ ಅತಿಯ್ಯ ಹೇಳಿದರು. ಗುಪ್ತಚರ ವರದಿಯ ಹಿನ್ನೆಲೆಯಲ್ಲಿ ಈ ವಿಷಯ ಹೇಳುತ್ತಿರುವುದಾಗಿ ಅವರು ಹೇಳಿದರು.. ದಿಗ್ಬಂಧನದ ಮೊದಲು ಸೌದಿ ಮತ್ತು ಕತರ್ ನಡುವೆ ವಿವಿಧ ಸಮಸ್ಯೆಗಳು ಇದ್ದವು. ಕಳೆದ ದಿವಸ ಅಲ್ಜಝೀರ ನ್ಯೂಸ್ಗೆ ಕತರ್ ರಕ್ಷಣಾ ಸಚಿವರು ನಿರ್ಣಾಯಕ ವಿಷಯವನ್ನೇ ಬಯಲುಗೊಳಿಸಿದ್ದಾರೆ .
ವಾಸ್ತವಿಕತೆ ಮತ್ತು ವಿಷಯದ ಮೇಲೆ ಅವಲೋಕನ ನಡೆಸಿದ ಬಳಿಕ ಅಮೆರಿಕ ಅಧ್ಯಕ್ಷ ಟ್ರಂಪ್ ಸೌದಿಯ ನೇತೃತ್ವದ ದಿಗ್ಬಂಧನಕ್ಕೆ ಬೆಂಬಲ ನೀಡದಿರಲು ನಿರ್ಧರಿಸಿದ್ದರು. ಪರಸ್ಪರ ಗೌರವ, ಸಾರ್ವಜನಿಕ ಹಿತವನ್ನು ಮನಗಂಡು ಅಮೆರಿಕ, ಕತರ್ ಪರಸ್ಪರ ನಡುವೆ ರಾಜತಾಂತ್ರಿಕ ಸಖ್ಯವಿದೆ ಎಂದು ಸಚಿವರು ಹೇಳಿದರು.
2017 ಜೂನ್ನಲ್ಲಿ ಕತರ್ ಮೇಲೆ ನೆರೆಯ ಯುಎಇ, ಸೌದಿ ಅರೇಬಿಯ, ಬಹ್ರೈನ್ , ಈಜಿಪ್ಟ್ ವಾಯು, ಭೂ, ನೌಕಾ ಕ್ಷೇತ್ರದಲ್ಲಿ ಸಂಪೂರ್ಣ ದಿಗ್ಬಂಧ ಹಾಕಿತು. ಭಯೋತ್ಪಾದನೆ ಸಹಿತ ವಿವಿಧ ಆರೋಪಗಳನ್ನು ಮಾಡಿ ದಿಗ್ಬಂಧನ ಹೇರಲಾಗಿತ್ತು. ಆದರೆ ಆರೋಪಗಳನ್ನು ಕತರ್ ನಿರಾಕರಿಸಿತು. ಇದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕೋರ್ಟಿನಲ್ಲಿ ಕತರ ಪರ ತೀರ್ಪು ಕೂಡ ಬಂದಿದೆ.
ಓದುಗರೇ, ಸನ್ಮಾರ್ಗ fecebook ಪೇಜ್ ಅನ್ನು ಲೈಕ್ ಮಾಡಿ ಬೆಂಬಲಿಸಿ.












