ನಿಮ್ಮ ಧ್ವನಿಯಿಂದ ಭಾರತ ಸ್ವತಂತ್ರವಾಗಲಿದೆ: ರಾಹುಲ್ ಗಾಂಧಿಯಿಂದ ರೈತರಿಗೆ ದಿಲ್‍ ಕಿ ಬಾತ್ , ವೀಡಿಯೊ

0
531

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಸೆ. 29: ಕೃಷಿ ಕಾನೂನು ವಿರುದ್ಧ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ಹೋರಾಟಕ್ಕಿಳಿದಿವೆ. ಕಾಂಗ್ರೆಸ್ ನಾಯಕರು ಕಾನೂನು ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗುವುದು ಎಂದು ಘೋಷಿಸಿದ್ದಾರೆ. ಈ ವಿರೋಧದ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಸೂದೆ ಕುರಿತು ರೈತರ ದಿಲ್‍ ಕಿ ಬಾತ್ (ಹೃದಯದ ಮಾತು) ಆಲಿಸಿದ್ದಾರೆ. ರೈತ ಸಹೋದರರ ಧ್ವನಿಯು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ರಾಹುಲ್ ಗಾಂಧಿ ರೈತರೊಂದಿಗೆ ಮಾತುಕತೆಯಾಡುವ ವೀಡಿಯೊ ಕಾಂಗ್ರೆಸ್ ಬಿಡುಗಡೆಗೊಳಿಸಿದೆ. ಇದರಲ್ಲಿ ರಾಹುಲ್ ಗಾಂಧಿ ರೈತರನ್ನು MSP ಹೋಗುವ ಕುರಿತು ನಿಮಗೆ ಏನನಿಸುತ್ತದೆ ಎಂದು ಕೇಳುತ್ತಿದ್ದಾರೆ. ಒಂದುವೇಳೆ ಕಾನೂನಿಂದ ರೈತರಿಗೆ ಒಳಿತಾಗುವುದಿದ್ದರೆ MSP (ಕನಿಷ್ಠ ಬೆಂಬಲ ಬೆಲೆ) ಕುರಿತು ಸರಕಾರ ಕಾನೂನು ಯಾಕೆ ಮಾಡುವುದಿಲ್ಲ. ಆದ್ದರಿಂದ ರೈತರ ಧ್ವನಿಯಿಂದ ಭಾರತ ಸ್ವತಂತ್ರವಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರೈತರ ಧ್ವನಿಯನ್ನು ಸಂಸತ್ತು ಮತ್ತು ಹೊರಗೆ ದಮನಿಸಲಾಗಿದೆ. ಕೃಷಿ ಕಾನೂನು ರೈತರಿಗೆ ಮೃತ್ಯು ಆದೇಶವಾಗಿದೆ. ಪ್ರಜಾಪ್ರಭುತ್ವ ಕೊನೆಗೊಂಡುದರ ಸೂಚನೆಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಕಳೆದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ರೈತರಿಗೆ ಸಂಬಂಧಿಸಿದ ಮೂರು ಕಾನೂನುಗಳು ಪಾಸಾಗಿವೆ. ಇದನ್ನು ವಿರೋಧಿಸಿ ರೈತರು ದೇಶಾದ್ಯಂತ ಪ್ರತಿಭಟನೆಗಿಳಿದಿದ್ದಾರೆ.

ಓದುಗರೇ, ಸನ್ಮಾರ್ಗ fecebook ಪೇಜ್ ಅನ್ನು ಲೈಕ್ ಮಾಡಿ ಬೆಂಬಲಿಸಿ.