ಜಾರ್ಖಂಡ್‌ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಹಾಜಿ ಹುಸೇನ್ ಅನ್ಸಾರಿ ನಿಧನ

0
725

ಸನ್ಮಾರ್ಗ ವಾರ್ತೆ

ಜಾರ್ಖಂಡ್,ಅ.3: ಜಾರ್ಖಂಡ್‌ನ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಹಾಜಿ ಹುಸೇನ್ ಅನ್ಸಾರಿ(73) ಅವರು ಶನಿವಾರ ಕೊರೋನ ಚಿಕಿತ್ಸೆ ಪಡೆಯುತ್ತಿರುವಾಗ ನಿಧನರಾದರು ಎಂಬುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಹಿರಿಯ ಜೆಎಂಎಂ ಮುಖಂಡರಾದ ಅನ್ಸಾರಿ ಅವರನ್ನು ಕೊರೋನ ದೃಢಪಟ್ಟ ‌ಹಿನ್ನೆಲೆಯಲ್ಲಿ ಎರಡು ವಾರಗಳ ಹಿಂದೆ ಮೆಡಂತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶುಕ್ರವಾರ ಅನ್ಸಾರಿಯವರ ಕೊರೋನ ವರದಿಯು ನೆಗೆಟಿವ್ ಆಗಿದ್ದು, ಅವರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದರು. ಕೋವಿಡ್‌ನಿಂದಲ್ಲ ಬದಲಾಗಿ ಹೃದಯ ಸ್ತಂಭನದಿಂದಾಗಿ(ಹೃದಯಾಘಾತ) ಅವರು ಇಂದು ಸಂಜೆ ನಿಧನರಾದರು”ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.

ಅವರು ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಅನ್ಸಾರಿ ಅವರ ಕುಟುಂಬ ಹೇಳಿದೆ.