ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಅ.3: ಕೊರೋನ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇರಿಲ್ಯಾಂಡಿನ ವಾಲ್ಟರ್ ರೀಡ್ ಸೈನಿಕ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ಶುಕ್ರವಾರ ಸಂಜೆಯ ವೇಳೆ ಟ್ರಂಪ್ರನ್ನು ಹೆಲಿಕಾಪ್ಟರಿನಲ್ಲಿ ಆಸ್ಪತ್ರೆಗೆ ತರಲಾಗಿದೆ.
ತಾನು ಆರೋಗ್ಯವಾಗಿದ್ದೇನೆ. ಸಮಸ್ಯೆಯೇನಿಲ್ಲ ಎಂದು ಟ್ರಂಪ್ ಹೇಳುತ್ತಿರುವ ವೀಡಿಯೊವನ್ನು ವೈಟ್ ಹೌಸ್ ಹೊರಬಿಟ್ಟಿದೆ. ಮೆಲಾನಿಯಾರವರು ಆರೋಗ್ಯದಿಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೆಲವು ಕಾಲ ಅವರು ವಾಲ್ಟರ್ ರೀಡ್ನ ಓರಿಸ್ನಿಂದ ಟ್ರಂಪ್ ಕೆಲಸ ಮಾಡಲಿದ್ದಾರೆ ಎಂದು ಅವರ ಪತ್ರಿಕಾ ಕಾರ್ಯದರ್ಶಿ ತಿಳಿಸಿದ್ದಾರೆ. 74 ವರ್ಷದ ಟ್ರಂಪ್ರನ್ನು ಆಂಟಿಬಾಡಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ತದನಂತರ ಕೊರೋನ ಲಕ್ಷಣ ಗೋಚರಿಸಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪತ್ನಿ ಮೆಲಾನಿಯಾರಿಗೂ ಕೊರೋನ ದೃಢಪಟ್ಟಿದೆ. ಮೆಲಾನಿಯಾ ಅಧಿಕೃತ ವಸತಿಯಲ್ಲಿಯೇ ಮುಂದುವರಿದಿದ್ದಾರೆ.
ಟ್ರಂಪ್ರ ಸಲಹೆಗಾರ್ತಿ ಹಾಪ್ಹಿಕ್ಸ್ರಿಗೂ ಕೊರೋನ ದೃಢಪಟ್ಟಿತ್ತು. ನಂತರ ಟ್ರಂಪ್ ಮತ್ತು ಪತ್ನಿ ಮೆಲಾನಿಯ ಕ್ವಾರಂಟೈನ್ನಲ್ಲಿದ್ದರು. ಟ್ರಂಪ್ರ ಜೊತೆ ಸದಾ ಇರುವ ಸಲಹೆಗಾರರಲ್ಲಿ ಹಾಪ್ಹಿಕ್ಸ್ ಕೂಡ ಒಬ್ಬರು.












