ಹಥ್ರಾಸ್: ಆತ್ಮವಿಶ್ವಾಸ ಕಳೆದುಕೊಂಡ ಆ ಅಮ್ಮ…

0
649

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.5: ಅವಳಿಗೆ ಶಾಲೆಗೆ ಹೋಗಬೇಕಾಗಿದ್ದರೆ ಲಾರಿ, ಬಸ್‍ಗಳು ವೇಗವಾಗಿ ಓಡಾಡುವ ರಸ್ತೆಯನ್ನು ದಾಟಬೇಕಾಗಿತ್ತು. ವಾಹನ ಢಿಕ್ಕಿಯಾದೀತೇ, ಯಾರಾದರೂ ಅಪಹರಿಸಿಕೊಂಡು ಹೋದಾರೆ ಎಂದು ಹೆದರಿ ಐದನೇ ಕ್ಲಾಸಿಗೆ ನಾವು ಶಾಲೆ ಬಿಡಿಸಿದೆವು. ಅಂದು ಹೆದರಿದ್ದು ಈಗ ನಿಜವಾಗಿ ನಡೆದಿದೆ.  ಅವಳನ್ನು ನಮಗೆ ಕಾಪಾಡಲಾಗಿಲ್ಲ”.  ತಮ್ಮನ್ನು ಭೇಟಿಯಾದ ಪತ್ರರ್ಕರೊಂದಿಗೆ ಹಥ್ರಾಸ್ ಸಂತ್ರಸ್ತೆಯ ತಾಯಿ ಹೇಳಿದ ಮಾತುಗಳಿವು. ನಾನು ಹತ್ತಿರವಿಲ್ಲ ಅವಳಿಗೆ ಮಲಗಿ ನಿದ್ರಿಸಲೂ ಆಗಿಲ್ಲ. ಆ ಮಗಳನ್ನು ಕೊನೆಯ ಬಾರಿ ನೋಡಲು ಕೂಡ ಅವರು ನಮಗೆ ಅವಕಾಶ ನೀಡಲಿಲ್ಲ… ನಾನು ಇನ್ನು ಹೇಗೆ ಸಮಾಧಾನದಿಂದ ನಿದ್ರಿಸಬಲ್ಲೆ ಎಂದು ತಾಯಿ ಪ್ರಶ್ನಿಸುತ್ತಿದ್ದಾರೆ.

ಐದು ಮಕ್ಕಳಲ್ಲಿ ನಾಲ್ಕನೆಯವಳು ಹತ್ಯೆಯಾದ ಸಂತ್ರಸ್ತೆ. ಮನೆಯಲ್ಲಿ ಮೊದಲು ಶಾಲಾ ಶಿಕ್ಷಣ ಪಡೆದದ್ದೂ ಅವಳೇ. ಸೆಪ್ಟಂಬರ್ ಹದಿನಾಲ್ಕರಂದು ನಾವಿಬ್ಬರೂ ಸೇರಿ ಮನೆಯಿಂದ ಐದು ನಿಮಿಷ ನಡೆದರೆ ತಲುಪುವ ಗದ್ದೆಗೆ ಹುಲ್ಲು ತರಲು ಹೋದೆವು. ನಾನು ಗದ್ದೆಯ ಇನ್ನೊಂದು ಕಡೆಯಲ್ಲಿ ಹುಲ್ಲು ಹೆರೆಯುತ್ತಿದ್ದೆ. ಆಗ ಅವಳನ್ನು ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದರು. ಮಗಳೆಲ್ಲಿ ಎಂದು ಹುಡುಕಿದಾಗ ಸ್ವಲ್ಪ ದೂರದಲ್ಲಿ ರಕ್ತದ ಮಡುವಿನಲ್ಲಿ ಬಿದ್ದ ಸ್ಥಿತಿಯಲ್ಲಿ ನೋಡಿದೆ ಎಂದು ಘಟನೆಯನ್ನು ವಿವರಿಸುತ್ತಾ ಆ ತಾಯಿ ಹೇಳಿದರು. ಇದಕ್ಕಿಂತ ಮೊದಲೂ ದುಷ್ಕರ್ಮಿಗಳು ಕಿರುಕುಳ ನೀಡಲು ಯತ್ನಿಸಿದ್ದರು. ಹೆದರಿ ಮಾರ್ಕೆಟ್ಟಿಗೂ ಬಹಳ ಅಪರೂಪದಲ್ಲಿ ಹೋಗುವುದು ಎಂದು ಸಹೋದರ ಪತ್ನಿ ಹೇಳಿದ್ದಾರೆ.

300ಕ್ಕೂ ಹೆಚ್ಚು ಪೊಲೀಸರನ್ನು ಹಾಕಿ ಗ್ರಾಮದಲ್ಲಿ ಮಾಧ್ಯಮಕ್ಕೆ ಸರಕಾರ ನಿಷೇಧ ಹೇರಿತ್ತು. ತೀವ್ರ ಟೀಕೆಗಳು ಬಂದ ಮೇಲೆ, ಶನಿವಾರ ಮಾಧ್ಯಮಗಳಿಗೆ ಕುಟುಂಬವನ್ನು ಭೇಟಿಯಾಗಲು ಅನುಮತಿಸಲಾಯಿತು. ಸಂತ್ರಸ್ತೆಯ ಕುಟುಂಬ ವಾಲ್ಮೀಕಿ ವಿಭಾಗಕ್ಕೆ ಸೇರಿದೆ. ಮಾಧ್ಯಮಗಳ ಗಮನ ಕೊನೆಗೊಂಡಾಗ ತಮ್ಮ ಮೇಲೆ ಸವರ್ಣೀಯರ ಹಲ್ಲೆ ನಡೆಯಬಹುದೆಂದು ಈ ದಲಿತರಲ್ಲಿ ಹೆದರಿಕೆ ಇದೆ.