ಬಿಹಾರ ಚುನಾವಣೆ: ಬಿಜೆಪಿ ಟಿಕೆಟ್ ಸಿಗದವರು ಎಲ್‍ಜೆಪಿಗೆ ಸೇರ್ಪಡೆ

0
579

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.8: ಬಿಜೆಪಿ-ಜನತಾ ದಳ ಸೀಟು ಹಂಚಿಕೆ ಮುಗಿದಿದ್ದು ಟಿಕೆಟ್ ಸಿಗದೆ ನಿರಾಶರಾದ ಹಲವಾರು ಮಂದಿ ಬಿಜೆಪಿ ತೊರೆದು ಲೋಕ್ ಜನಶಕ್ತಿ ಪಾರ್ಟಿಗೆ ಸೇರುತ್ತಿದ್ದಾರೆ. ಜನತಾದಳ-ಯುನೊಂದಿಗೆ ಸಖ್ಯ ಕಡಿದುಕೊಂಡು ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಲವರಿಗೆ ಸೀಟಿಲ್ಲದಂತಾಗಿದ್ದು. ಇವರೆಲ್ಲ ಈ ಸಲ ಸ್ವತಂತ್ರವಾಗಿ ಸ್ಪರ್ಧಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್‌ರಿಗೆ ಸೆಡ್ಡು ಹೊಡೆದಿರುವ ಎಲ್‍ಜೆಪಿಗೆ ಹೋಗಿ ಅಲ್ಲಿಂದ ಟಿಕೆಟ್ ಪಡೆಯುತ್ತಿದ್ದಾರೆ.

ಕಳೆದ ಸಲದ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯಥಿಯೆನ್ನಲಾಗಿದ್ದ ಹಿರಿಯ ನಾಯಕ ರಾಜೇಂದ್ರ ಸಿಂಗ್ ಎಲ್‍ಜೆಪಿಗೆ ಸೇರ್ಪಡೆಯಾಗಿದ್ದಾರೆ. ಸೀಟು ಹಂಚಿಕೆಯ ಪ್ರಕಾರ ಅವರು ಗೆದ್ದ ದಿನಾರ ವಿಧಾನಸಭಾ ಕ್ಷೇತ್ರ ಜೆಡಿಯು ಪಾಲಾಗಿದೆ.

ನಾಲ್ಕು ದಶಕಗಳಿಂದ ಆರ್‍ಎಸ್‍ಎಸ್‍ನಲ್ಲಿದ್ದ ರಾಜೇಂದ್ರ ಸಿಂಗ್‍ರನ್ನು ಪಾರ್ಟಿಗೆ ತೆಗೆದುಕೊಂಡು ಎಲ್‍ಜೆಪಿ ಟಿಕೆಟ್ ನೀಡಿದ್ದರಿಂದ ಜೆಡಿಯು ಅಭ್ಯರ್ಥಿಯ ಪರಿಸ್ಥಿತಿ ಇಕ್ಕಟ್ಟಿನಲ್ಲಿ ಸಿಲುಕಿದೆ. ಪಾಸ್ವಾನ್‍ರೊಂದಿಗೆ ಮುನಿಸಿಕೊಂಡ ಜೆಡಿಯುವನ್ನು ಮೂಲೆಗುಂಪಾಗಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ವರದಿಯಾಗಿತ್ತು. ಇದು ಎಲ್‍ಜೆಪಿ, ಬಿಜೆಪಿಯೊಳಗಿನ ಆಶಯವಾಗಿದೆ ಎನ್ನಲಾಗುತ್ತಿದೆ.

ರಾಜೇಂದ್ರ ಸಿಂಗ್‍ರ ಬೆನ್ನಿಗೆ ಹಿರಿಯ ಬಿಜೆಪಿ ನಾಯಕಿ ಉಷಾ ಎಲ್‍ಜೆಪಿಗೆ ಹೋಗಿದ್ದು ಅವರಿಗೂ ಎಲ್‍ಜೆಪಿ ಟಿಕೆಟ್ ನೀಡಿದೆ. ಬಿಜೆಪಿಯ ವಿರುದ್ಧ ಸ್ಪರ್ಧಿಸದಿದ್ದರೂ ಎಲ್‍ಜೆಪಿಯನ್ನು ಸೋಲಿಸಲು ಎಲ್‍ಜೆಪಿ ಕಟಿಬದ್ಧವಾಗಿದ್ದು 120 ಸೀಟುಗಳಲ್ಲಿ ಅದು ಸ್ಪರ್ಧಿಸಲಿದೆ. ಎಲ್‍ಜೆಪಿಗೆ ಬರುವ ಹಲವರನ್ನು ಸೇರಿಸಿಕೊಂಡು ಜೆಡಿಯುವನ್ನು ಸೋಲಿಸಲು ಸಾಧ್ಯವಾಗಬಹುದು. ಮತ್ತೊಬ್ಬ ಹಿರಿಯ ಬಿಜೆಪಿ ನಾಯಕ ರಾಮ ನರೇಶ್ ಚೌರಾಸಿಯ, ಬರುನ್ ಪಾಸ್ವಾನ್ ಎಲ್‍ಜೆಪಿಗೆ ಸೇರ್ಪಡೆಯಾಗಿದ್ದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯ ಚಿತ್ರವಿರುವ ಪೋಸ್ಟರ್‌ನ್ನು ಉಪಯೋಗಿಸುವುದಿಲ್ಲ ಎಂದು ಎಲ್‍ಜೆಪಿಯೊಂದಿಗೆ ಖಚಿತಪಡಿಸಿಕೊಳ್ಳಬೇಕೆಂದು ಜೆಡಿಯು ಬಿಜೆಪಿಯನ್ನು ಆಗ್ರಹಿಸಿದೆ.