ಜೆಎನ್‍ಯು ವಿದ್ಯಾರ್ಥಿ ನಜೀಬ್ ನಾಪತ್ತೆಗೆ ನಾಲ್ಕು ವರ್ಷ…

0
641

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.15: ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯ(ಜೆಎನ್‍ಯು)ದಿಂದ ಪ್ರಥಮ ವರ್ಷ ಬಯೊಟೆಕ್ನಾಲಜಿ ವಿದ್ಯಾರ್ಥಿ ನಜೀಬ್ ಅಹ್ಮದ್ ನಿಗೂಢವಾಗಿ ನಾಪತ್ತೆಯಾಗಿ ನಾಲ್ಕು ವರ್ಷವಾಗಿದೆ. ಕ್ಯಾಂಪಸಿನಿಂದ ಎಬಿವಿಪಿ ಕಾರ್ಯಕರ್ತರ ಹಲ್ಲೆಯ ನಂತರ 2016 ಅಕ್ಟೋಬರ್ ಹದಿನೈದರಂದು ನಜೀಬ್ ಹಾಸ್ಟೆಲಿನಿಂದ ಕಾಣೆಯಾಗಿದ್ದರು.

ಉತ್ತರ ಪ್ರದೇಶ ಬದಾಯೂನ್ ನಿವಾಸಿ ನಜೀಬ್‍ರನ್ನು ಪತ್ತೆ ಮಾಡಬೇಕೆಂದು ಆಗ್ರಹಿಸಿ ಕೊರ್ಟಿಗೆ ಅರ್ಜಿಸಲ್ಲಿಸಿ, ಬೀದಿಯಲ್ಲಿ ಪ್ರತಿಭಟನೆ ಮಾಡಿದ ತಾಯಿ ಫಾತಿಮ ನಫೀಸ್‍ರ ಹೋರಾಟಕ್ಕೂ ನಾಲ್ಕು ವರ್ಷ ಆಗಿದೆ. ಆದರು ಅವರಿಗೆ ಈವರೆಗೂ ನ್ಯಾಯ ಸಿಕ್ಕಿಲ್ಲ.

ಮಗ ನಾಪತ್ತೆಯಾದ ಬಳಿಕ ಗೃಹಿಣಿ ಫಾತಿಮಾ ನೂರಾರು ಕಿ.ಮೀ ದೂರದ ದೆಹಲಿಗೆ ಬಂದು ಹೋರಾಟ ಮಾಡಿದ್ದರಿಂದ ಪ್ರಕರಣವನ್ನು ಸಿಬಿಐಗೆ ವಹಿಸಿದರೂ ಅವರಿಂದಲೂ ತನಿಖೆ ಮುಂದುವರಿಸಲು ಆಗಿಲ್ಲ. ಈ ವೇಳೆ ದಿಲ್ಲಿಯ ಹೆಚ್ಚಿನ ಹೋರಾಟಗಳಲ್ಲಿ ಮುಂಚೂಣಿ ಹೋರಾಟಗಾರ್ತಿಯಾಗಿ ಫಾತಿಮಾ ಬದಲಾದರು.

ನಜೀಬ್ ಐಎಸ್‍ಗೆ ಸೇರಿದ್ದಾನೆ ಎಂದು ಸುಳ್ಳು ಪ್ರಚಾರ ಮಾಡಿದ ಮಾಧ್ಯಮಗಳ ವಿರುದ್ಧವೂ ಅವರು ಕಾನೂನು ಹೋರಾಟ ಮಾಡುತ್ತಿದ್ದಾರೆ. ನಜೀಬ್‍ರ ನಾಪತ್ತೆಗೆ ನಾಲ್ಕು ವರ್ಷ ಪೂರ್ಣಗೊಂಡು ಗುರುವಾರ ರಾತ್ರೆ ಏಳು ಗಂಟೆಗೆ ನಜೀಬ್ ಎಲ್ಲಿ(#Whereisnajeeb) ಎಂಬ ಹ್ಯಾಶ್‍ಟ್ಯಾಗ್‍ನಲ್ಲಿ ನಜೀಬ್‍ಗೆ ನ್ಯಾಯ ಕೋರಿ ಪ್ರತಿಭಟನೆ ನಡೆಸಲು ಫಾತಿಮಾ ನಫೀಸ್ ಕರೆ ನೀಡಿದ್ದಾರೆ.