ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.14: ಜನನ- ಮರಣ ದಾಖಲಾತಿಗೆ ಆಧಾರ್ ಕಡ್ಡಾಯವಲ್ಲ ಎಂದು ಮಾಹಿತಿಹಕ್ಕು ಅರ್ಜಿಯಲ್ಲಿ ರಿಜಿಸ್ಟ್ರಾರ್ ಆಫ್ ಇಂಡಿಯಾ ತಿಳಿಸಿದ್ದಾರೆ. ಸ್ವಯಂ ಆಧಾರ್ ಕೊಟ್ಟಿದ್ದರೂ ಅದು ಯಾವುದೇ ದಾಖಲೆಯಲ್ಲಿ ತೋರಿಸಬೇಕಾಗಿಲ್ಲ. ಜನನ ಮರಣದ ಡೇಟಾದಲ್ಲಿ ಅದನ್ನು ತೆಗೆದಿರಿಸಬೇಕಾಗಿಲ್ಲ ಎಂದು ತಿಳಿಸಿದ್ದಾರೆ. ವಿಶಾಖಪಟ್ಟಣದ ವಕೀಲ ಎಂವಿಎಸ್ ಅನೀಲ್ ಕುಮಾರ್ ಸಲ್ಲಿಸಿದ ಅರ್ಜಿಯಲ್ಲಿ ರಿಜಿಸ್ಟ್ರಾರ್ ಆಫ್ ಇಂಡಿಯಾ ಈ ವಿವರವನ್ನು ನೀಡಿದ್ದಾರೆ.
1969ರ ಜನನ ಮರಣ ನೋಂದಣಿ ಕಾನೂನು ಪ್ರಕಾರ ಜನನ-ಮರಣ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಇದು ಕೇಂದ್ರದ ಕಾನೂನು ಆಗಿದೆ. ಆಧಾರ್ ಉಪಯೋಗಿಸುವುದು ಈ ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗಿಲ್ಲ. ಕಾನೂನು ವ್ಯವಸ್ಥೆಗಳನ್ನು ಜಾರಿಗೊಳಿಸುವುದು ರಾಜ್ಯ ಸರಕಾರಗಳು ಎಂದು ರಿಜಿಸ್ಟ್ರಾರ್ ಜನರಲ್ ವಿವರಿಸಿದ್ದಾರೆ.












