ಪಾಲ್ಘರ್: ಅರ್ನಬ್‍ ಗೋಸ್ವಾಮಿಗೆ ಪುನಃ ಸಮನ್ಸ್

0
662

ಸನ್ಮಾರ್ಗ ವಾರ್ತೆ

ಮುಂಬೈ,ಅ.15: ಪಾಲ್ಘರ್‌ನಲ್ಲಿ ಇಬ್ಬರು ಸನ್ಯಾಸಿಗಳನ್ನು ಜನರ ಗುಂಪು ಹಲ್ಲೆ ಮಾಡಿ ಕೊಲೆಯೆಸಗಿದ ಘಟನೆಯಲ್ಲಿ ಎರಡು ವಿಭಾಗಗಳ ನಡುವೆ ಉದ್ವಿಗ್ನತೆ ಸೃಷ್ಟಿಸುವ ರೀತಿಯಲ್ಲಿ ಚ್ಯಾನೆಲ್ ಚರ್ಚೆ ಆಯೋಜಿಸಿದ್ದ ರಿಪಬ್ಲಿಕ್ ಟಿವಿ ಎಡಿಟರ್ ಇನ್ ಚೀಫ್ ಅರ್ನಾಬ್ ಗೋಸ್ವಾಮಿಗೆ ಮುಂಬೈ ಪೊಲೀಸರು ಸಮನ್ಸ್ ಮತ್ತು ಶೋಕಾಸ್ ನೋಟಿಸು ಜಾರಿ ಮಾಡಿದ್ದಾರೆ.

ಶುಕ್ರವಾರ ವರ್ಲಿ, ಅಡಿಶನಲ್ ಕಮಿಷನರ್ ಮುಂದೆ ಹಾಜರಾಗಬೇಕೆಂದು ಪೊಲೀಸರು ಸೂಚಿಸಿದ್ದು ಇದೇವೇಳೆ ಲಾಕ್‍ಡೌನ್ ಕಾಲದಲ್ಲಿ ಬಾಂದ್ರ ರೈಲ್ವೆ ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ಸುತ್ತುಗೂಡಿದ ಘಟನೆಯಲ್ಲಿಯೂ ಪ್ರಚೋದನಾಕರಿಯಾಗಿ ಚರ್ಚೆ ಮಾಡಿದ್ದಕ್ಕಾಗಿ ಅರ್ನಾಬ್ ವಿರುದ್ಧ ಕೇಸು ದಾಖಲಿಸಲಾಗಿದೆ.

ಈ ಎರಡು ಪ್ರಕರಣದಲ್ಲಿ ಈ ಹಿಂದೆ ಪೊಲೀಸರು ಅರ್ನಾಬ್‍ರನ್ನು ತನಿಖೆ ಮಾಡಿದ್ದರು. ಪ್ರೇಕ್ಷಕರು ಮತ್ತು ರೇಟಿಂಗ್ ಏಜೆನ್ಸಿ ಸಿಬ್ಬಂದಿಗಳಿಗೆ ಹಣ ಕೊಟ್ಟು ರಿಪಬ್ಲಿಕ್ ಟಿವಿ ಟಿಆರ್‌ಪಿ ರೇಟಿಂಗ್ ಹೆಚ್ಚಿಸಿದ್ದನ್ನು ಮುಂಬೈ ಪೊಲೀಸರು ಇತ್ತೀಚೆಗೆ ಬಹಿರಂಗಪಡಿಸಿದ್ದರು.