ಒಡಿಸ್ಸಾ: 17 ವರ್ಷದ ಬಾಲಕಿಯ ಅಪಹರಣ, ಫಾರ್ಮಿನಲ್ಲಿ ಕೂಡಿಹಾಕಿ 22 ದಿವಸ ಸಾಮೂಹಿಕ ಅತ್ಯಾಚಾರ

0
1172

ಸನ್ಮಾರ್ಗ ವಾರ್ತೆ

ಭುವನೇಶ್ವರ್,ಅ.15: ಒಡಿಸ್ಸಾದ ಕಟಕ್‍ನಲ್ಲಿ ಮನೆಯಿಂದ ಹೊರಟಿದ್ದ 17 ವರ್ಷದ ಬಾಲಕಿಯನ್ನು ಅಪಹರಿಸಿ ಫಾರ್ಮಿನಲ್ಲಿ ಕೂಡಿ ಹಾಕಿ 22 ದಿನಗಳ ಕಾಲ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಬಯಲಾಗಿದೆ. ಮನೆಯವರಲ್ಲಿ ಜಗಳ ಮಾಡಿ ಹೋಗಿದ್ದ ಯುವತಿಗೆ ಸಹಾಯ ಮಾಡುವ ಮಾತು ಕೊಟ್ಟ ಯುವಕ ಹತ್ತಿರದ ಫಾರ್ಮ್‌ಗೆ ಕರೆದುಕೊಂಡು ಹೋಗಿ ಕೋಣೆಯಲ್ಲಿ ಕೂಡಿಹಾಕಿದ್ದ. ಯುವಕ ಮತ್ತು ಆತನ ಗೆಳೆಯ ಸೇರಿ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರವ್ಯಸಗಿದ್ದಾರೆ.

ಫಾರ್ಮಿನಲ್ಲಿ ಕಾನೂನು ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರಿನಲ್ಲಿ ದಾಳಿ ಮಾಡಿದ ಪೊಲೀಸರ ತಂಡ ಬಾಲಕಿಯನ್ನು ರಕ್ಷಿಸಿದೆ.

ಕಳೆದ ತಿಂಗಳು ಬಾಲಕಿ ಹೆತ್ತವರೊಂದಿಗೆ ಜಗಳ ಮಾಡಿ ಮನೆಯಿಂದ ಹೊರಟಿದ್ದಳು. ಮನೆಗೆ ಮರಳಲು ಕಟಕ್‍ನ ಒಎಂಪಿ ಸ್ಕ್ವೇರ್‌ನಲ್ಲಿ ಬಸ್‍ಗೆ ಕಾದಿದ್ದಾಗ ಬೈಕಿನಲ್ಲಿ ಬಂದ ಯುವಕ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ನಂಬಿಸಿ ಕರೆದುಕೊಂಡು ಹೋಗಿದ್ದ. ಮನೆಗೆ ಹೋಗುವ ಬದಲು ಗತಿರೌಟ್‍ಪಟ್ನ ಗ್ರಾಮದ ಒಂದು ಫಾರ್ಮ್ ಹೌಸ್‍ನಲ್ಲಿ ಕೂಡಿಹಾಕಿದ್ದ.

ಈತ ಮತ್ತು ಈತನ ಗೆಳೆಯ 22 ದಿನಗಳ ಕಾಲ ಅತ್ಯಾಚಾರ ಮಾಡಿದ್ದಾರೆ ಎಂದು ಜಿಲ್ಲಾ ಶಿಶು ಕಲ್ಯಾಣ ಸಮಿತಿಗೆ ಬಾಲಕಿ ಹೇಳಿದ್ದಾಳೆ. ಫಾರ್ಮಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಊರಿನವರು ದೂರು ನೀಡಿದ ಆಧಾರದಲ್ಲಿ ಪೊಲೀಸರು ದಾಳಿ ಮಾಡಿ ಶೋಧ ನಡೆಸಿದಾಗ ಬಾಲಕಿ ಪತ್ತೆಯಾಗಿದ್ದಳು. ಅವರು ಅವಳನ್ನು ಅಲ್ಲಿಂದ ರಕ್ಷಿಸಿ ಜಿಲ್ಲಾ ಶಿಶು ಕಲ್ಯಾಣ್ ಸಮಿತಿಯ ಮುಂದೆ ಹಾಜರುಪಡಿಸಿದ್ದಾರೆ. ನಂತರ ಬಾಲಕಿಯನ್ನು ಅನಾಥಾಶ್ರಮಕ್ಕೆ ಕಳುಹಿಸಿಕೊಡಲಾಗಿದೆ. ಘಟನೆಯಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದು ಈತನ ಗೆಳೆಯ ಕುರಿತು ಸುಳಿವು ಲಭಿಸಿದೆ ಎಂದು ಎಸಿಪಿ ಪ್ರತೀಕ್ ಸಿಂಗ್ ತಿಳಿಸಿದರು.