ಸನ್ಮಾರ್ಗ ವಾರ್ತೆ
ಪಾಟ್ನ,ಅ.16: ಹಿರಿಯ ಜೆಡಿಯು ನಾಯಕ ಬಿಹಾರದ ಪಂಚಾಯತ್ ರಾಜ್ ಸಚಿವ ಕಪಿಲ್ ದಿಯೊ ಕಾಮತ್ರು ಕೊರೋನದಿಂದ ನಿಧನರಾದರು ಅವರಿಗೆ 69 ವರ್ಷ ವಯಸ್ಸಾಗಿತ್ತು. ಕೊರೋನ ದೃಢಪಟ್ಟ ನಂತರ ಅವರನ್ನು ಪಾಟ್ನದ ಏಮ್ಸ್ಗೆ ದಾಖಲಿಸಲಾಗಿತ್ತು. ಸೋಮವಾರ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದರಿಂದ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು.
ಕಳೆದ ನಲ್ವತ್ತು ವರ್ಷಗಳಿಂದ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದು ಹತ್ತು ವರ್ಷಗಳಿಂದ ಬಿಹಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸಚಿವ ಕಪಿಲ್ ದಿಯೊ ಕಾಮತ್ ನಿಧನಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಶೋಕ ಸೂಚಿಸಿದ್ದಾರೆ. ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಅಧಿಕೃತ ಗೌರವಗಳೊಡನೆ ಇಂದು ಸಂಜೆ ನಡೆಯಲಿದೆ.












