ಕೊರೋನ ನಿಯಂತ್ರಿಸಲಿಕ್ಕಾಗಿ ಹೋರಾಡಲು ಹಿಂದಿಯಲ್ಲಿ ‘ಶಾಂತಿ’ ಎಂದು ಟ್ವೀಟ್ ಮಾಡಿದ WHO‌ ಮುಖ್ಯಸ್ಥ

0
334

ಸನ್ಮಾರ್ಗ ವಾರ್ತೆ

ಸ್ವಿಝರ್ಲ್ಯಾಂಡ್: ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೊಸ್ ಅದಾನೊಮ್ ಘೆಬ್ರೆಯೆಸಸ್ ರವರು ಶಾಂತಿಯನ್ನು ಕಾಪಾಡಿಕೊಳ್ಳಬೇಕು ಮತ್ತು ಕೊರೋನಾ ವೈರಸ್ ವಿರುದ್ಧ ಹೋರಾಡುವತ್ತ ಗಮನಹರಿಸಬೇಕು ಮತ್ತು ನಾವು ದುರ್ಬಲರಾಗಬಾರದು ಎಂದು ಒತ್ತಾಯಿಸಿದ್ದಾರೆ‌‌.

ಇದು ಸಾಂಕ್ರಾಮಿಕ ರೋಗ: ವೈರಸ್‌ನ ಹಿಂದೆ ಹೋಗಿ ಅದನ್ನು ನಿಮೂರ್ಲನೆ ಮಾಡೋಣ, ದುರ್ಬಲರಾಗದಿರೋಣ” ಎಂದು ಅವರು ಬರೆದಿದ್ದಾರೆ.

‘ಶಾಂತಿ’ ಎಂದು ಹಿಂದಿ ಭಾಷೆಯಲ್ಲಿ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ವಿಶ್ವಾದ್ಯಂತ 38 ದಶಲಕ್ಷಕ್ಕೂ ಹೆಚ್ಚು ಜನರು ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.

ಭಾರತ ಮತ್ತು ಚೀನಾ ಮಧ್ಯೆ ಗಡಿ ವಿವಾದವು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವುದರಿಂದ ಕೆಲವು ಟ್ವೀಟಿಗರು ನಿಮ್ಮ ಈ ‘ಶಾಂತಿ’ ಪದವನ್ನು ಚೀನಾದ ಅಧ್ಯಕ್ಷ ಜಿನ್ ಪಿಂಗ್ ಇಷ್ಟಪಡುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.