ಸನ್ಮಾರ್ಗ ವಾರ್ತೆ
ಚೆನ್ನೈ, ಅ. 27: ಮನುಸ್ಮೃತಿಯ ವಿರುದ್ಧ ಹೇಳಿಕೆ ನೀಡಿದ ಲೋಕಸಭಾ ಸದಸ್ಯ ವಿಡುದಲೈ ಚಿರುತೈಗಳ್ ಕಕ್ಷಿ ಅದ್ಯಕ್ಷ ತೊಲ್ ತಿರುವಮಾವಳನ್ರ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ನಟಿ ಖುಶ್ಬೂರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಳೆಯರು ಹಿಂದುಳಿದ ವಿಭಾಗಗಳನ್ನು ಕೆಟ್ಟದಾಗಿ ಚಿತ್ರಿಸಿರುವುದು ಮನುಸ್ಮೃತಿಯ ಸಾರಾಂಶ ಎಂದು ಸಂಸದರು ಹೇಳಿದ್ದರು. ಇದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆಗಿಳಿದಿದೆ.
ತಿರುಮಾವಳನ್ ವಿರುದ್ಧ ಪ್ರತಿಭಟನೆಗೆ ಗುಡಲ್ಲೂರಿಗೆ ಹೋಗುವ ವೇಳೆ ಕೊರೊನ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಳೆದ ತಿಂಗಳು ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ ನಟಿ ಖುಶ್ಬೂ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಮಿಳುನಾಡಿನ ಚೆಂಗಲ್ಪೆಟ್ ಪೊಲೀಸರು ಖುಶ್ಬುರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗುಡಲ್ಲೂರಿನಲ್ಲಿ ಪ್ರತಿಭಟನೆಗೆ ಪೊಲೀಸರ ಅನುಮತಿಯಿರಲಿಲ್ಲ. ತಿರುಮಾವಲನ್ ವಿರುದ್ಧ ಘೋಷಣೆ ಕೂಗುತ್ತಾ ಬಂದ ಕಾರ್ಯಕರ್ತರನ್ನು ಪೊಲೀಸರು ವ್ಯಾನ್ಗೆ ತುಂಬಿ ಕರೆದೊಯ್ದಿದ್ದಾರೆ.
ಮನುಸ್ಮೃತಿಯನ್ನು ಟೀಕಿಸಿದ ಸಂಸದ ಕ್ಷಮೆಯಾಚಿಸಬೇಕೆಂದು ಬಿಜೆಪಿ ಆಗ್ರಹಿಸಿದೆ. ಬಿಜೆಪಿ ಮಹಿಳಾ ವಿಭಾಗ ಪ್ರತಿಭಟನೆಗೆ ಕರೆ ನೀಡಿದೆ. ತಿರುಮಾವಲನ್ರ ಅಭಿಪ್ರಾಯ ಕೋಮು ಗಲಭೆಗೆ ಕಾರಣವಾಗಲಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ತಾನು ಮನುಸ್ಮೃತಿಯನ್ನು ಉದ್ಧರಿಸಿ ಮಾತಾಡಿದ್ದೇನೆ. ಮನುಸ್ಮೃತಿಯನ್ನು ನಿಷೇಧಿಸಬೇಕೆಂದು ಹೇಳಿಲ್ಲ. ಗಲಭೆ ಸೃಷ್ಟಿಸಲು ಬಿಜೆಪಿ ಸುಳ್ಳು ವಾರ್ತೆ ಪ್ರಚಾರ ಮಾಡುತ್ತಿದೆ ಎಂದು ತಿರುಮಾವಲನ್ ಹೆಳಿದರು. ಬಿಜೆಪಿಯ ದೂರಿನಡಿಯಲ್ಲಿ ತಿರುಮಾವಲನ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪುಟವನ್ನು like ಮಾಡಿ ನಮ್ಮನ್ನು ಬೆಂಬಲಿಸಿ.












