ಈಗ ನೆಗೆಟಿವ್ ಬೆಳವಣಿಗೆ, ಮುಂದಿನ ವರ್ಷ ಆರ್ಥಿಕ ಶಕ್ತಿ- ನಿರ್ಮಲಾ ಸೀತಾರಾಮನ್

0
424

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಅ. 28: ಆರ್ಥಿಕ ಬೆಳವಣಿಗೆ ಋಣಾತ್ಮಕವಾದರೂ ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಶುಭ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಮುಂದಿನ ಆರ್ಥಿಕ ವರ್ಷ ಭಾರತ ವೇಗವಾಗಿ ಬೆಳೆಯುವ ಆರ್ಥಿಕ ಶಕ್ತಿಯಾಗಲಿದೆ ಎಂದು ಅವರು ಹೇಳಿದರು. ಈ ವರ್ಷ ನೆಗೆಟಿವ್ ಬೆಳವಣಿಗೆಯಲ್ಲಿ ಮುಂದೆ ಸಾಗಿದರೂ ಮುಂದಿನ ವರ್ಷ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕ ಶಕ್ತಿಗಳಲ್ಲಿ ಭಾರತವೂ ಇರಲಿದೆ. ಗ್ರಾಮೀಣ ಭಾರತದಲ್ಲಿ ಬೇಡಿಕೆಯ ಹೆಚ್ಚಳದ ಕಾರಣದಿಂದ ಆಂತರಿಕ ವರಮಾನದಲ್ಲಿ ಹೆಚ್ಚಳವಾಗಲಿದೆ. ಹಬ್ಬದ ಸೀಝನ್ ಆರ್ಥಿಕ ಕ್ಷೇತ್ರಕ್ಕೆ ಪ್ರಯೋಜನಕಾರಿ ಎಂದು ಇಂಡಿಯ ಎನರ್ಜಿ ಫಾರಂನಲ್ಲಿ ಮಾತಾಡುವ ವೇಳೆ ಸಚಿವೆ ತಿಳಿಸಿದರು.

ಮೂಲಭೂತ ಅಭಿವೃದ್ಧಿಗೆ ದೇಶದ ಪ್ರಥಮ ಆದ್ಯತೆಯಾಗಿದೆ. ಭಾರತದ ಧಾನ್ಯಗಳು, ತರಕಾರಿ, ಹಣ್ಣುಗಳನ್ನು ರಫ್ತು ಮಾಡಲು ಸಿದ್ಧವಾಗಿದೆ ಎಂದು ದೃಢ ಪಡಿಸುವುದಕ್ಕೆ ಎರಡನೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಓದುಗರೇ, sanmarga ಫೇಸ್ ಬುಕ್ ಪುಟವನ್ನು like ಮಾಡಿ ನಮ್ಮನ್ನು ಬೆಂಬಲಿಸಿ.