ಸನ್ಮಾರ್ಗ ವಾರ್ತೆ
ಚೆನ್ನೈ,ನ.2: ರಾಜಕೀಯ ಪ್ರವೇಶವನ್ನು ಕೈಬಿಡಲಿದ್ದಾರೆ ಎಂಬ ವದಂತಿಯ ನಡುವೆ ರಜನೀಕಾಂತ್‍ರನ್ನು ಆರೆಸ್ಸೆಸ್ ಸಿದ್ಧಾಂತಿಯೊಬ್ಬರು ಭೇಟಿಯಾಗಿ ಚರ್ಚಿಸಿದ್ದಾರೆ. ಎಸ್. ಗುರುಮೂರ್ತಿ ರಜನೀಕಾಂತ್‍ರನ್ನು ಅವರ ಪಾಯಸ್ ಗಾರ್ಡನ್ ವಸತಿಯಲ್ಲಿ ಭೇಟಿಯಾಗಿದ್ದಾರೆ.
ಒಂದೂವರೆಗಂಟೆಕಾಲ ಇಬ್ಬರೂ ಚರ್ಚಿಸಿದ್ದಾರೆ. ಆರೋಗ್ಯ ವಿಚಾರಿಸಲಿಕ್ಕಾಗಿ ಗುರುಮೂರ್ತಿ ಬಂದಿದ್ದರು ಎಂದು ಹೇಳಲಾಗುತ್ತಿದೆ.
ವಯಸ್ಸು ಮತ್ತು ಕೊರೋನ ಹಿನ್ನೆಲೆಯಲ್ಲಿ ರಜನಿ ರಾಜಕೀಯ ಪ್ರವೇಶದಿಂದ ಹಿಂದೆ ಸರಿಯಲಿದ್ದಾರೆ ಎಂದು ವದಂತಿ ಹರಡಿತ್ತು. ಈ ವಿಷಯವನ್ನು ವಿವರಿಸಿ ಅವರು ಫ್ಯಾನ್ಸ್ ಅಸೋಸಿಯೇನ್‍ಗೆ ಬರೆದಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಆದರೆ ಪತ್ರ ತನ್ನದಲ್ಲ. ಆರೋಗ್ಯದ ಕುರಿತು ಅದರಲ್ಲಿರುವ ವಿಷಯ ನಿಜವೆಂದು ಅವರು ಟ್ವೀಟ್ ಮಾಡಿದ್ದರು. ಈ ನಡುವೆ ಆರೆಸ್ಸೆಸ್ ಸಿದ್ಧಾಂತಿ ರಜನೀಕಾಂತ್‍ರನ್ನು ಸಂದರ್ಶಿಸಿದ್ದಾರೆ.
2017ರಲ್ಲಿ ರಜನಿ ಸಕ್ರಿಯ ರಾಜಕೀಯಕ್ಕೆ ಬರುತ್ತಾರೆ ಎಂದು ವದಂತಿ ಹರಡಿಕೊಂಡಿತ್ತು. ರಜನೀಕಾಂತ್‍ಗೆ ರಾಜಕೀಯದಲ್ಲಿ ಭವಿಷ್ಯವಿದೆ. ಬಿಜೆಪಿಯೊಂದಿಗೆ ಸಖ್ಯಮಾಡಿಕೊಂಡರೆ ಉಪಯುಕ್ತವಾಗಬಹುದೆಂದು ಗುರುಮೂರ್ತಿ ಈ ಹಿಂದೆ ಹೇಳಿದ್ದರು.












