ಸನ್ಮಾರ್ಗ ವಾರ್ತೆ
ಚೆನ್ನೈ: 2021ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ದ್ರಾವಿಡ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ, ಏಕಾಂಗಿಯಾಗಿ ಸ್ಪರ್ಧಿಸುತ್ತೇನೆ ಎಂದು ಮಕ್ಕಳ್ ನೀದಿಮಯ್ಯಂ ಪಕ್ಷದ ಅಧ್ಯಕ್ಷ, ನಟ ಕಮಲ್ ಹಾಸನ್ ತಮ್ಮ ತೀರ್ಮಾನ ವ್ಯಕ್ತಪಡಿಸಿದ್ದಾರೆ.
ಪಕ್ಷದ ಜಿಲ್ಲಾ ಕಾರ್ಯದರ್ಶಿಗಳು ಮತ್ತು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಕಮಲ್ ಹಾಸನ್ ಈ ತೀರ್ಮಾನ ಮುಂದಿಟ್ಟಿದ್ದಾರೆ. ನಮ್ಮ ಮೈತ್ರಿ ಜನರೊಂದಿಗಿದೆ. ಡಿಎಂಕೆ-ಅಣ್ಣಾ ಡಿಎಂಕೆ ಪಕ್ಷಗಳ ಬದಲಿಗೆ ಮೂರನೇ ಶಕ್ತಿಯಾಗಿ ಬೆಳೆಯಲು ಪಕ್ಷಕ್ಕೆ ಸಾಧ್ಯವಾಗಿದೆ. 2013ರ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಉಂಟಾದ ನಿರ್ಣಾಯಕ ಬದಲಾವಣೆ ಈ ಬಾರಿ ತಮಿಳುನಾಡಿನಲ್ಲೂ ಸಂಭವಿಸಲಿದೆ ಎಂದು ಕಮಲ್ ಹಾಸನ್ ಅಭಿಪ್ರಾಯಪಟ್ಟರು.
ಆದರೆ, ಕಮಲ್ ಹಾಸನ್ರ ಈ ನಿಲುವು ಜಾತ್ಯಾತೀತ ಮತಗಳನ್ನು ಚದುರಿಸಲು ಸಹಕಾರಿಯಾಗಲಿದೆ ಎಂದು, ಯು.ಪಿ.ಎ ಪಕ್ಷದ ಜೊತೆ ಸೇರಿಕೊಳ್ಳಬೇಕೆಂದೂ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್ ಅಳಗಿರಿ ಮನವಿ ಮಾಡಿಕೊಂಡಿದ್ದಾರೆ.












