ಲೈಂಗಿಕ ಕಿರುಕುಳ ಆರೋಪ: ನಟ ವಿಜಯ್ ರಾಜ್ ಬಂಧನ

0
460

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.4: ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಾಲಿವುಡ್ ನಟ ವಿಜಯ್ ರಾಜ್‌ರನ್ನು ಪೊಲೀಸರು ಬಂಧಿಸಿದ್ದಾರೆ.ಮಹಾರಾಷ್ಟ್ರದ ಗೊಂಡಿಯದಲ್ಲಿ ನಟನನ್ನು ಪೊಲೀಸರು ಸೋಮವಾರ ಬಂಧಿಸಿದ್ದು ಈತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದೇವೆಂದು ಹೆಚ್ಚುವರಿ ಎಸ್ಪಿ ಅತುಲ್ ಕುಲಕರ್ಣಿ ಹೇಳಿದರು.

ವಿದ್ಯಾಬಾಲನ್ ಪ್ರಧಾನ ಪಾತ್ರದಲ್ಲಿರುವ ಶೇರ್ನಿ ಎಂಬ ಚಲನಚಿತ್ರದ ಮಧ್ಯಪ್ರದೇಶದ ಸೆಟ್‍ನಲ್ಲಿ ವಿಜಯ್‍ರಾಜ್ ತನ್ನೊಂದಿಗೆ ಅನುವಿತವಾಗಿ ವರ್ತಿಸಿದ್ದಾರೆ ಎಂದು ಮಹಿಳೆಯೊಬ್ಬರು ರಾಮ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ನಟನನ್ನು ಬಂಧಿಸಿ ಗೊಂಡಿಯದ ಕೋರ್ಟಿಗೆ ಪೊಲೀಸರು ಹಾಜರುಪಡಿಸಿದ್ದು ಕೋರ್ಟಿನ ಜಾಮಿನಲ್ಲಿ ವಿಜಯ್ ಹೊರಬಂದಿದ್ದಾರೆ. ಮಧ್ಯಪ್ರದೇಶದ ಬಾಲಾಘಟ್ ಜಿಲ್ಲೆಯಲ್ಲಿ ಶೇರ್ನಿಯ ಚಿತ್ರೀಕರಣ ನಡೆಯುತ್ತಿದೆ.