ಅರುಣಾಚಲ ಪ್ರದೇಶದ ಸಮೀಪವೇ ಚೀನದಿಂದ ರೈಲು ಯೋಜನೆ

0
532

ಸನ್ಮಾರ್ಗ ವಾರ್ತೆ

ಬೀಜಿಂಗ್,ನ.9: ಚೀನದ ದಕ್ಷಿಣ ಭಾಗದಲ್ಲಿರುವ ಸಿಚುವಾನೆ ಪ್ರಾಂತದ ಸಂಪರ್ಕವನ್ನು ಟಿಬೆಟಿನ ಲಿನ್ಸಿನೊಂದಿಗೆ ಜೋಡಿಸುವ ಸಲುವಾಗಿ ರೈಲ್ವೆ ಯೋಜನೆಯನ್ನು ವೇಗವಾಗಿ ನಿರ್ವಹಿಸಲು ಅಧ್ಯಕ್ಷ ಜಿಶಿನ್‍ಪಿಂಗ್ ಸೂಚನೆ ನೀಡಿದ್ದಾರೆ. ಅರುಣಾಚಲ ಪ್ರದೇಶಕ್ಕೆ ಸಮೀಪದಲ್ಲಿ ಲಿನ್ಸಿ ಇದೆ. ಟಿಬೆಟಿನ ಎರಡನೇ ಪ್ರಧಾನ ರೈಲ್ವೆ ಯೋಜನೆ ಇದು.

ಅರುಣಾಚಲ ಪ್ರದೇಶ ದಕ್ಷಿಣ ಟಿಬೆಟ್‍ನ ಭಾಗವಾಗಿದೆ ಎಂದು ಚೀನ ವಾದಿಸುತ್ತಿದೆ. ಭಾರತ ಈ ವಾದವನ್ನು ಸಂಪೂರ್ಣ ತಳ್ಳಿಹಾಕಿದೆ. ಹಿಮಾಲಯನ್ ವಲದಯದಲ್ಲಿ ಚೀನ ನಿರ್ಮಿಸಿದ ಐದು ವಿಮಾನ ನಿಲ್ದಾಣಗಳಲ್ಲಿ ಒಂದು ಲಿನ್ಸಿಯಲ್ಲಿದೆ.