ಸನ್ಮಾರ್ಗ ವಾರ್ತೆ
ಮುಂಬೈ,ನ.9: ಅಮೆರಿಕದ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪರಾಜಿತಗೊಂಡಂತೆ ಬಿಹಾರದಲ್ಲಿ ಎನ್ಡಿಎ ಪರಾಜಿತವಾಗಲಿದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ಹೇಳಿದೆ. ಮಂಗಳವಾರ ಬಿಹಾರದ ಮತ ಎಣಿಕೆ ನಡೆಯಲಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ಗಾಗಿದ್ದು ಬಿಜೆಪಿಗೂ ಆಗಲಿದೆ. ಕೊರೋ ಮಹಾಮಾರಿಯ ಆರಂಭದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಇಟ್ಟುಕೊಂಡ ಕೇಂದ್ರ ಸರಕಾರವನ್ನು ಶಿವಸೇನೆ ಟೀಕಿಸಿತು. ದೇಶದಲ್ಲಿ ತಾವಲ್ಲದೆ ಬೇರೊಂದು ಪರ್ಯಾಯ ಇಲ್ಲ ಎಂಬ ಮಿಥ್ಯ ಧೋರಣೆಯನ್ನು ಜನರಿಗೆ ಬದಲಾಯಿಸಬೇಕಾಗುತ್ತದೆ ಎಂದು ಶಿವಸೇನೆ ಹೇಳಿದೆ.
ಅಮೆರಿಕದಲ್ಲಿ ಅಧಿಕಾರ ಬದಲಾಗಿದೆ. ಅಮೆರಿಕದಲ್ಲಿ ಟ್ರಂಪ್ ಎಷ್ಟರವರೆಗೆ ಮಾಡಿದರೆಂದರೆ ಬೈಡನ್ ಚುನಾವಣೆಯಲ್ಲಿ ಗೆದ್ದರು. ಇದೇ ವೇಳೆ, ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್ಡಿಎ ಸಖ್ಯ ಬಿಹಾರದಲ್ಲಿ ಸೋಲಲಿದೆ ಎಂದು ಶಿವಸೇನೆ ಹೇಳಿದೆ.
ಭಾರತದಲ್ಲಿ ನಾವು ‘ನಮಸ್ತೆ ಟ್ರಂಪ್’ ಮಾಡುತ್ತಿದ್ದೆವು. ಇದೇ ವೇಳೆ ಅಮೆರಿಕದ ಜನರು ಅವರಿಗೆ ಬೈ ಬೈ ಹೇಳಿದರೆಂದು ಶಿವಸೇನೆ ಟೀಕಿಸಿದೆ. ಪ್ರಧಾನಿ ನರೇಂದ್ರ ಮೋದಿ, ನಿತೀಶ್ ಕುಮಾರ್ ಯುವನಾಯಕ ತೇಜಸ್ವಿ ಯಾದವರ ಮುಂದೆ ನಿಲ್ಲಲು ಸಾಧ್ಯವಿಲ್ಲ ಎಂದು ಶಿವಸೇನೆ ಬಿಜೆಪಿಯ ಮೇಲೆ ಚಾಟಿ ಬೀಸಿದೆ. ಜನರು ಬಿಹಾರದ ಚುನಾವಣೆಯಲ್ಲಿ ಅವರ ಕೈಗಳಿಗೆ ವಹಿಸಿಯಾಗಿದೆ. ಪ್ರಧಾನಿ, ನಿತೀಶ್ರ ಮುಂದೆ ಮೊಣಕಾಲೂರುವುದಿಲ್ಲ ಎಂದು ಶಿವಸೇನೆ ಅಭಿಪ್ರಾಯ ಪ್ರಕಟಿಸಿದೆ.
ಬಿಹಾರದಲ್ಲಿ ಜಂಗಲ್ ರಾಜ್ ಇತ್ತೆಂದ ಶಿವಸೇನೆ ಜಂಗಲ್ ರಾಜ್ ಕೊನೆಗೊಂಡಿದೆ. ಜನರು ಮೊದಲು ಅಧಿಕಾರಿಗಳನ್ನು ಹೊರಗೆ ಹೋಗಲು ಸೂಚಿಸಿದ್ದಾರೆ ಎಂದು ಹೇಳಿದೆ. ಅಮೆರಿಕದಲ್ಲಿ ಇದುವೇ ಆಗಿದ್ದು. ಕೊರೋನ ಮಹಾಮಾರಿ ಸಮಯದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸಲಾಯಿತೆಂದು ಶಿವಸೇನೆ ಆರೋಪಿಸಿದೆ.












